ಬದಿಯಡ್ಕ: ದಿ| ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ಪತ್ನಿ ಸುಗುಣ ತಂತ್ರಿ (75) ನಿಧನ ಹೊಂದಿದರು. ವಯೋಸಹಜ ಅಸೌಖ್ಯದಿಂದಿದ್ದ ದ.ಕ. ಜಿಲ್ಲೆಯ ರಾಮಕುಂಜದ ಇರ್ಕುಮಠದಲ್ಲಿರುವ ತವರು ಮನೆಯಲ್ಲಿ ನಿಧನ ಸಂಭವಿಸಿದೆ. ಇವರಿಗೆ ಮಕ್ಕಳಿಲ್ಲ. ಧಾರ್ಮಿಕ, ಸಾಂಸ್ಕೃತಿಕ, ಸಂಗೀತಾಸಕ್ತರಾಗಿದ್ದ ಇವರು ಅನೇಕ ದೇವಸ್ಥಾನಗಳಲ್ಲಿ ಧಾರ್ಮಿಕ ಪ್ರವಚನ, ಸಂಗೀತ ಕಛೇರಿ ನೀಡಿದ್ದರು.






