ಮೊಬೈಲ್ ಟವರ್‌ನ ಮೇಲೇರಿ ಆತ್ಮಹತ್ಯೆ ಬೆದರಿಕೆವ್ಯಕ್ತಿಯನ್ನು ಕೆಳಕ್ಕಿಳಿಸುವಲ್ಲಿ ಯಶಸ್ವಿಯಾದ ಪೊಲೀಸ್, ಅಗ್ನಿಶಾಮಕದಳ

ಬದಿಯಡ್ಕ: ನೈಲಾನ್ ಹಗ್ಗ, ಪೆಟ್ರೋಲ್ ತುಂಬಿದ ಕ್ಯಾನ್ ಹಾಗೂ ಬ್ಯಾಗ್ ಸಹಿತ ಬಿಎಸ್‌ಎನ್‌ಎಲ್ ಟವರ್‌ನ ಮೇಲೇರಿ ಆತ್ಮಹತ್ಯೆ ಬೆದರಿಕೆ ಯೊಡ್ಡುತ್ತಿದ್ದ ವ್ಯಕ್ತಿಯನ್ನು ಸಮಾಧಾನ ಪಡಿಸಿ ಕೆಳಗಿಳಿಸುವಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕದಳ ಯಶಸ್ವಿಯಾ ಗಿದೆ.  ನಾರಂಪಾಡಿ ಬಳಿಯ ನೆಲ್ಯಡ್ಕ ನಿವಾಸಿಯೂ, ಬದಿಯಡ್ಕದಲ್ಲಿ ಈ ಹಿಂದೆ ಫೋಟೋಗ್ರಾಫರ್ ಆಗಿದ್ದ ಪಿ.ಕೆ. ಮೋಹನ್‌ದಾಸ್ ಅವರನ್ನು  ನಿನ್ನೆ   ಭಾರೀ ಪ್ರಯತ್ನದ ಬಳಿಕ ಟವರ್‌ನಿಂದ ಕೆಳಗಿಳಿಸಲಾಯಿತು. 

ನಿನ್ನೆ ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿರುವ ಬಿಎಸ್‌ಎನ್‌ಎಲ್ ಟವರ್‌ನ ಮೇಲೆ ಹತ್ತಿದ ಮೋಹನ್ ದಾಸ್ ಗಟ್ಟಿಯಾಗಿ  ಬೊಬ್ಬೆ ಹಾಕುತ್ತಿರು ವುದು ಸ್ಥಳೀಯರ ಗಮನಕ್ಕೆ ಬಂದಿತ್ತು. ಈ ಬಗ್ಗೆ ತಿಳಿದ ಬದಿಯಡ್ಕ ಪೊಲೀಸರು ಹಾಗೂ ನಾಗರಿಕರು ಸ್ಥಳಕ್ಕೆ ತಲುಪುವುದ ರೊಂದಿಗೆ ಮೋಹನ್‌ದಾಸ್ ಮತ್ತಷ್ಟು ಎತ್ತರಕ್ಕೆ ಹತ್ತಿದ್ದರು. ಅಲ್ಲದೆ ತನ್ನನ್ನು ಸೆರೆಹಿಡಿಯಲೆತ್ನಿಸಿದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು. ಈ ಮಧ್ಯೆ ಕಾಸರ ಗೋಡಿನಿಂದ ತಲುಪಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೋಹನ್ ದಾಸ್‌ರನ್ನು ಸಮಾಧಾನಪಡಿಸಲು  ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕದಳದ ಸಿಬ್ಬಂದಿಗಳು ಟವರ್‌ನ ಮೇಲೆ ಹತ್ತಿ ಮೋಹನ್ ದಾಸ್‌ರನ್ನು ಕೆಳಕ್ಕಿಳಿಸಿದ್ದಾರೆ. ಮೋಹನ್ ದಾಸ್ ಇದು ೫ನೇ ಬಾರಿ ಆತ್ಮಹತ್ಯೆ ಬೆದರಿಕೆಯೊಡ್ಡುತ್ತಿ ರುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ. ಮೂಕಂಪಾರೆಯಲ್ಲಿ

ಮೋಹನ್‌ದಾಸ್‌ರ ಸ್ವಾಧೀನದಲ್ಲಿ ಒಂದು ಎಕ್ರೆಗಿಂತ ಹೆಚ್ಚು ಸರಕಾರಿ ಸ್ಥಳವಿದೆ. ಪ್ರಸ್ತುತ ಸ್ಥಳದ ೧೮ ಸೆಂಟ್‌ಗೆ ಈ ಮೊದಲು ಪಟ್ಟಾ ನೀಡಲಾಗಿದೆ.  ಉಳಿದ ಸ್ಥಳಕ್ಕೂ ಪಟ್ಟಾ ನೀಡ ಬೇಕೆಂಬುದಾಗಿದೆ ಮೋಹನ್‌ದಾಸ್‌ರ ಬೇಡಿಕೆ. ಇದೇ ಬೇಡಿಕೆಯನ್ನು ಮುಂದಿರಿಸಿ ಮೋಹನ್‌ದಾಸ್ ನಿನ್ನೆ ಟವರ್‌ಗೇರಿರುವುದಾಗಿ ತಿಳಿಸಲಾಗಿದೆ.

RELATED NEWS

You cannot copy contents of this page