ಕುಂಬಳೆ: ಪರಿಸರ ಮಾಲಿನ್ಯ, ಆರೋಗ್ಯಕ್ಕೆ ಬೆದರಿಕೆಯೊಡ್ಡುತ್ತಿರುವ ಅನಂತಪುರ ಉದ್ದಿಮೆ ಪಾರ್ಕ್‌ನ ವಿವಾದಿತ ಫ್ಯಾಕ್ಟರಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇಸು ದಾಖಲಿಸಿಕೊಂಡಿದೆ. ಫ್ಯಾಕ್ಟರಿಯಿಂದ ಹರಿದುಹೋಗುವ ಮಲಿನ ನೀರು ಕುಡಿಯುವ ನೀರನ್ನು ಕೂಡಾ ಕಲುಷಿತಗೊಳಿಸುತ್ತಿರು ವುದಾಗಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಫ್ಯಾಕ್ಟರಿಯನ್ನು ಮುಚ್ಚುಗಡೆಗೊಳಿಸಲು ಈ ಮೊದಲು ನಿರ್ದೇಶ ನೀಡಿತ್ತು. ಫ್ಯಾಕ್ಟರಿಯ ಈಗಿನ ಚಟುವಟಿಕೆ ಪರಿಸರ ಪ್ರದೇಶಗಳ ಕುಡಿಯುವ ನೀರಿಗೂ ಹಾನಿಕರವಾಗಿ ಬಾಧಿಸಲಿದೆಯೆಂದು ಎಸ್‌ಡಿಪಿಐ ಕುಂಬಳೆ ಯೂನಿಟ್ ನೀಡಿದ ದೂರಿನಂತೆ ರಾಷ್ಟ್ರೀಯ ಮಾನವಹಕ್ಕು ಆಯೋಗ ಕೇಸು ದಾಖಲಿಸಿಕೊಂಡಿದೆ. ಅನಂತಪುರ ಆಯಿಲ್ ಫ್ಯಾಕ್ಟರಿಯಿಂದ ಹೊರಸೂಸುವ ದುರ್ನಾತ ನಾಗರಿಕರಿಗೆ ತೀವ್ರ ಸಮಸ್ಯೆ ಸೃಷ್ಟಿಸುತ್ತಿದೆ.
ಮಕ್ಕಳ ಸಹಿತ ಹಿರಿಯರಿಗೂ ವಾಂತಿ,ಕೆಮ್ಮು, ಉಸಿರಾಟ ಸಮಸ್ಯೆ ಅನುಭವಗೊಂಡ ಹಿನ್ನೆಲೆಯಲ್ಲಿ ನಾಗರಿಕರು ಫ್ಯಾಕ್ಟರಿ ವಿರುದ್ಧ ಕ್ರಿಯಾ ಸಮಿತಿ ರೂಪಿಸಿದ್ದು, ಚಳವಳಿ ಹಮ್ಮಿಕೊಂಡಿದ್ದರು. ಇದರ ಬೆನ್ನಲ್ಲೇ ಫ್ಯಾಕ್ಟರಿಯ ಮಲಿನಜಲ ಸಮೀಪದ ಮನೆಗಳ ಬಾವಿಗೆ ಹರಿದುಹೋಗುತ್ತಿರುವುದಾಗಿ ಪತ್ತೆಹಚ್ಚಲಾಗಿದೆ. ಈಬಗ್ಗೆ ಜಿಲ್ಲಾಧಿಕಾರಿಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿ ಬಳಿಕ ಫ್ಯಾಕ್ಟರಿ ಮುಚ್ಚುಗಡೆಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದ್ದರು. ಅನಂತಪುರ ಉದ್ದಿಮೆ ವಲಯದಿಂದ ಹೊರಸೂ ಸುವ ವಾಯು ಮಾಲಿನ್ಯದಿಂದ ಅಸಹನೀಯ ದುರ್ನಾತ ಬೀರುತ್ತಿದೆ. ಇದು ಗಂಭೀರ ಆರೋಗ್ಯ ಸಮಸ್ಯೆ ಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಎಸ್‌ಡಿಪಿಐ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿತ್ತು.






