ಕಟಾವಿಗೆ ಸಿದ್ಧವಾದ ಭತ್ತ ಕೃಷಿ ಮಳೆಯಿಂದ ನಾಶ

ಕಾಸರಗೋಡು: ಕಟಾವಿಗೆ ಸಿದ್ಧವಾದ ಭತ್ತದ ಪೈರುಗಳು ಮಳೆಗೆ ನಾಶವಾಗಿದೆ. ಇನ್ನೂ ಕೂಡಾ ಮಳೆ ಮುಂದುವರಿದರೆ ಭತ್ತವು ಮೊಳಕೆಯೊಡೆಯುವ ಆತಂಕ ಕೃಷಿಕರಲ್ಲಿದೆ. ಬೈಹುಲ್ಲು ಕೂಡಾ ನಷ್ಟವಾಗಬಹುದು ಎಂದು ಕೃಷಿಕರು ನುಡಿಯುತ್ತಾರೆ. ನಿನ್ನೆ ಮಧ್ಯಾಹ್ನ ಆರಂಭಗೊಂಡ ಮಳೆ ಇನ್ನೂ ಮುಂದುವರಿಯುತ್ತಿದೆ. ಅಗತ್ಯದ ವೇಳೆ ಮಳೆ ಲಭಿಸದ ಹಿನ್ನೆಲೆಯಲ್ಲಿ ಮೋಟಾರ್ ಪಂಪ್ ಉಪಯೋಗಿಸಿ ಹೆಚ್ಚಿನ ಕೃಷಿಕರು ಈ ಬಾರಿ ಕೃಷಿಗೆ ನೀರುಣಿಸಿದ್ದಾರೆ. ಒಂದು ವಾರದ ಒಳಗೆ ಕಟಾವಿಗೆ ಸಿದ್ಧವಾದ ಕೃಷಿ ಅನಿರೀಕ್ಷಿತ ಮಳೆಯಿಂದಾಗಿ ನಾಶವಾಗಿದೆ. ಬಯಲುಗಳಲ್ಲಿ ನೀರು ಕಟ್ಟಿ ನಿಂತು ಪೈರುಗಳು ಕಟಾವು ನಡೆಸಲಾಗದ ಸ್ಥಿತಿಗೆ ತಲುಪಿದೆ.

ಬೇಡಡ್ಕ ಪಂಚಾಯತ್‌ನ  ಕೊಳತ್ತೂರು ಬಯಲ್‌ನಲ್ಲಿ ಕಟಾವಿಗೆ ಸಿದ್ಧವಾದ ಪೈರು ಪೂರ್ಣವಾಗಿ ನಾಶವಾಗಿದೆ. ಶ್ರೀವಿದ್ಯಾ, ರಘು, ಕುಮಾರನ್, ಬಾಲನ್, ತಂಬಾನ್, ರವಿ ಮೊದಲಾದವರ ಕೃಷಿ ಈ ರೀತಿ ನಾಶವಾಗಿದೆ ಎಂದು ತಿಳಿದು ಬಂದಿದೆ.

You cannot copy contents of this page