ಎಡನೀರು ಮಠಾಧೀಶರ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ ಸಮಾರಂಭ, ಆರನೇ ಪೀಠಾರೋಹಣ ವಾರ್ಷಿಕೋತ್ಸವ ನಾಳೆ

ಎಡನೀರು:  ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರ ಷಷ್ಠ ಚಾತುರ್ಮಾಸ್ಯದ ೬೦ ದಿನಗಳ ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಸತ್ರ ಸಮಾರೋಪ ಸಮಾರಂಭ ಮತ್ತು  ಆರನೇ ಪೀಠಾರೋಹಣ ವಾರ್ಷಿ ಕೋತ್ಸವ  ಸಮಾರಂಭ ನಾಳೆ ನಡೆಯಲಿರು ವುದು. ಬೆಳಿಗ್ಗೆ 6.30ರಿಂದ ಪೂಜೆ, 8/3೦ಕ್ಕೆ ಮೃತ್ತಿಕಾವಿಸರ್ಜನೆ, ಸೀಮೋಲ್ಲಂಘನ, 9.30ಕ್ಕೆ ಭಜನೆ, 11.30ಕ್ಕೆ ಯೋಗನೃತ್ಯ, ಗಣಪತಿ ಹವನ, ದಕ್ಷಿಣಾಮೂರ್ತಿಹವನ, ಗೋಪಾಲಕೃಷ್ಣ ಹವನ ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ ೧.೩೦ಕ್ಕೆ ಮಂತ್ರಾಕ್ಷತೆ, ೨ ಗಂಟೆಗೆ ಯಕ್ಷಗಾನ ಬಯಲಾಟ, ಸಂಜೆ ೭ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮುಖ್ಯ ಅತಿಥಿ ಯಾಗಿರುವರು.  ಕರ್ನಾಟಕ ಸರಕಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ.ಶ್ಯಾಮ್ ಭಟ್ ಗೌರವ ಉಪಸ್ಥಿತರಿರುವರು.  ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ೮.೩೦ರಿಂದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಪ್ರಾಯೋಜಿತ ಯಕ್ಷಗಾನ ಬಯಲಾಟ ನಡೆಯಲಿರುವುದು.

You cannot copy contents of this page