ಬೇಳ: 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಂಪ್ಯೂಟರೈಸ್ಡ್ ಡ್ರೈವಿಂಗ್ ಸೆಂಟರ್ ಕಾರ್ಯಾಚರಣೆಗೆ ಮನವಿ

ಬೇಳ: ಕುಮಾರಮಂಗಲ ಬಳಿ 1 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಿರುವ ಕಂಪ್ಯೂಟರೈಸ್ಡ್ ಡ್ರೈವಿಂಗ್ ಸೆಂಟರ್ ತೆರೆದು ಕಾರ್ಯಾಚರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ ಜಿಲ್ಲಾಧಿಕಾರಿ ಶ್ರೀ ಧನ್ಯಾ ಸುರೇಶ್‌ರಿಗೆ ಮನವಿ ನೀಡಿದರು. ರಾಜ್ಯ ಸಾರಿಗೆ ಸಚಿವಾಲಯದ ಆಶ್ರಯದಲ್ಲಿ ನಿರ್ಮಿಸಿರುವ ಈ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದರೂ ಕಾರ್ಯಾಚರಣೆ ಆರಂಭಿಸಲಾಗಿಲ್ಲ. ಜನರಿಗೆ ಡ್ರೈವಿಂಗ್ ಪರೀಕ್ಷೆ ಸಹಿತ ವಿವಿಧ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಈ ಕೇಂದ್ರವನ್ನು ನಿರ್ಮಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇಂದ್ರದ ಪ್ರಯೋಜನ ಜನರಿಗೆ ಲಭಿಸುತ್ತಿಲ್ಲವೆಂದು ಆರೋಪವಿದೆ. ಇದನ್ನು ಕೂಡಲೇ ತೆರೆದು ಕಾರ್ಯಾಚರಿಸಬೇಕೆಂದು ರಾಮಪ್ಪ ಮಂಜೇಶ್ವರ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದು, ರಾಜ್ಯ ಸಾರಿಗೆ ಸಚಿವರಿಗೂ ಈ ಬಗ್ಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

RELATED NEWS

You cannot copy contents of this page