ಉದ್ಯಾವರ ಪರಿಸರದಲ್ಲಿ ಸರಣಿ ಕಳವು: ಜನರಲ್ ಸ್ಟೋರ್‌ನಿಂದ 3000 ರೂ., ಸಿಗರೇಟ್ ಲಪಟಾವಣೆ

ಮಂಜೇಶ್ವರ: ಉದ್ಯಾವರ ಪರಿಸರದಲ್ಲಿ ಬುಧವಾರ ರಾತ್ರಿ ಸರಣಿ ಅಂಗಡಿ ಕಳವುಗೈದ ಘಟನೆ ನಡೆದಿದೆ. ಉದ್ಯಾವರ ಬಿ.ಎಸ್ ನಗರದಲ್ಲಿರುವ ತುಕರಾಮ ಎಂಬವರ ಜನರಲ್ ಸ್ಟೋರ್‌ನ ಶಟರ್ ಮುರಿದು ಒಳನುಗ್ಗಿದ ಕಳ್ಳರು ಡ್ರಾವರ್‌ನಲ್ಲಿರಿಸಿದ 3ಸಾವಿರ ರೂ. ಮತ್ತು ಬೆಲೆಬಾಳುವ ಸಿಗರೇಟ್ ಗಳನ್ನು ಕಳವುಗೈದಿದ್ದಾರೆ. ಅಲ್ಲದೆ ಅದೇ ಪರಿಸರದಲ್ಲಿರುವ ಯುನೈ ಟೆಡ್ ಬಿ.ಎಸ್ ಕ್ಲಬ್, ಉದ್ಯಾವರ ರಾಷ್ಟಿçÃಯ ಹೆದ್ದಾರಿ ಬಳಿಯಿರುವ ಸಾಧಿಕ್ ಎಂಬವರ ರೇಡಿಯೇಟರ್ ರಿಪೇರಿ ಅಂಗಡಿ ಹಾಗೂ ಮೋಣು ಎಂಬವರ ಹಣ್ಣಿನ ಅಂಗಡಿಗಳಲ್ಲಿ ಕಳವಿಗೆ ಯತ್ನ ನಡೆದಿದೆ.

ಶಟರ್ ಮುರಿದು ಒಳನುಗ್ಗಿದ ಕಳ್ಳರು ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿ ದ್ದಾರೆ. ಆದರೆ ಈ ಮೂರು ಅಂಗಡಿಗಳಿAದ ಯಾವುದೇ ನಗದು ಹಾಗೂ ಬೆಲೆ ಬಾಳುವ ವಸ್ತುಗಳು ಕಳ್ಳರಿಗೆ ಸಿಗಲಿಲ್ಲ. ನಿನ್ನೆ ಬೆಳಿಗ್ಗೆ ಅಂಗಡಿಗೆ ತಲುಪಿದಾಗಲೇ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ವ್ಯಾಪಕಗೊಂಡಿದ್ದು, ಸಾರ್ವಜನಿಕರು ಆತಂಕಗೊAಡಿದ್ದಾರೆ. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಿಗುಗೊಳಿಸಲು ನಿವಾಸಿಗಳು ಹಾಗೂ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page