ಉಪ್ಪಳ: ಶಿರಿಯ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುವ ತಂಡ ಮತ್ತೆ ಸಕ್ರಿಯಗೊಂಡಿದೆ. ಈ ಹಿನ್ನೆಲೆಯಲ್ಲಿ ತಂಡವನ್ನು ಸೆರೆಹಿಡಿ ಯಲು ಎಎಸ್ಪಿ ನೇತೃತ್ವ ದಲ್ಲಿ ಪೊಲೀ ಸರು ಕಾರ್ಯಾಚರಣೆ ತೀವ್ರಗೊಳಿಸಿ ದ್ದಾರೆ. ಇದರಂತೆ ನಿನ್ನೆ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಪಾವೂರು ನಿವಾಸಿ ಮುಹಮ್ಮದ್ ಅಶ್ರಫ್, ಲಾರಿಯ ಮಾಲಕ ಉಪ್ಪಳದ ಮೋಹನ್ ಶಿರಾಸ್ ಎಂಬಿವರನ್ನು ಎಎಸ್ಪಿ ಅಚ್ಯುತ್ ಅಶೋಕ್ ನೇತೃತ್ವದ ತಂಡ ಸೆರೆಹಿಡಿದಿದೆ. ವಾಹನ ತಪಾಸಣೆ ನಡೆಯುತ್ತಿದ್ದಂತೆ ಕೈಕಂಬ ಭಾಗದಿಂದ ಪೈವಳಿಕೆ ಭಾಗಕ್ಕೆ ತೆರಳುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಲಾರಿ ಯನ್ನು ನಿಲ್ಲಿಸಿದ ತಕ್ಷಣ ಇಳಿದು ಓಡಲು ಪ್ರಯತ್ನಿಸಿದ ಚಾಲಕ ಮುಹಮ್ಮದ್ ಅಶ್ರಫ್ನನ್ನು ಪೊಲೀಸರು ಅತೀ ಸಾಹಸಿಕವಾಗಿ ಸೆರೆಹಿಡಿದಿದ್ದಾರೆ. ಅದರ ಬೆನ್ನಲ್ಲೇ ತಲುಪಿದ ಬೈಕ್ ಸವಾರ ಪೊಲೀ ಸರನ್ನು ಕಂಡು ಮರಳಿ ಸಂಚರಿಸಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ಆತನನ್ನು ತನಿಖೆಗೊಳಪಡಿಸಿದಾಗ ಟಿಪ್ಪರ್ ಲಾರಿ ಮಾಲಕನಾಗಿ ದ್ದಾನೆಂದು ತಿಳಿದುಬಂದಿದೆ. ಮೋಹಿನ್ ಶಿರಾಸ್ ಲಾರಿಗೆ ಬೆಂಗಾವಲಾಗಿ ಬೈಕ್ನಲ್ಲಿ ಬಂದಿದ್ದನು. ಈತ ಸಂಚರಿಸಿದ ಬೈಕ್ನ್ನು ಕಸ್ಟಡಿಗೆ ತೆಗೆಯಲಾಗಿದೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.






