ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಾಸರಗೋಡು ಬ್ರಾಂಚ್ ಮಹಾಸಭೆ ಐಎಂಎ ಸಭಾಂಗಣದಲ್ಲಿ ಜರಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆ ಡಾ| ರೇಖಾ ರೈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಸ್ಟೇಟ್ ವರ್ಕಿಂಗ್ ಸಮಿತಿ ಸದಸ್ಯ ಡಾ| ನಾರಾಯಣ ನಾಯ್ಕ್, ಕಾರ್ಯದರ್ಶಿ ಡಾ| ಅಣ್ಣಪ್ಪ ಕಾಮತ್, ಡಾ| ಸುಂದರ ಆನೆಮಜಲು, ಡಾ| ಹರಿಕಿರಣ್ ಬಂಗೇರ ಮಾತನಾಡಿದರು. ಚುನಾವಣಾ ಅಧಿಕಾರಿಯಾಗಿ ಡಾ| ಜನಾರ್ದನ ನಾಯ್ಕ್ ಸಿ.ಎಚ್. ಚುನಾವಣೆ ಪ್ರಕ್ರಿಯೆ ನಿಯಂತ್ರಿಸಿದರು. ಅಧ್ಯಕ್ಷರಾಗಿ ಡಾ| ಎ. ಜಮಾಲ್ ಅಹಮ್ಮದ್, ಕಾರ್ಯದರ್ಶಿ ಯಾಗಿ ಡಾ| ಮಾಹಿನ್ ಪಿ. ಅಬ್ದುಲ್ಲ, ಕೋಶಾಧಿಕಾರಿ ಡಾ| ಗೋಪಿ ವಿ., ಉಪಾಧ್ಯಕ್ಷರಾಗಿ ಡಾ| ನಬೀಸ ಪಿ.ಕೆ, ಡಾ| ಸುಂದರ ಆನೆಮಜಲು, ಜೊತೆ ಕಾರ್ಯದರ್ಶಿಯಾಗಿ ಡಾ| ವಿವೇಕ್ ಕೃಷ್ಣ, ಸ್ಟೇಟ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಡಾ| ಬಿ. ನಾರಾಯಣ ನಾಯ್ಕ್ ಆಯ್ಕೆಯಾದರು. ಅಕ್ಟೋಬರ್ ೨೯ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸುವರು.







