ಕಾಲೇಜು ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ತೃಕರಿಪುರ, ಪಯ್ಯನ್ನೂರು ನಿವಾಸಿಗಳ ಸಹಿತ 5 ಮಂದಿ ಸೆರೆ

ಕಾಸರಗೋಡು: ಮಂಗಳೂರಿನಲ್ಲಿ ಕೇರಳೀಯ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ನಡೆಸಿದ ಪ್ರಕರಣದಲ್ಲಿ ಪಯ್ಯನ್ನೂರು, ತೃಕರಿಪುರ ನಿವಾಸಿಗಳ ಸಹಿತ 5 ಮಂದಿ ಹಿರಿಯ ವಿದ್ಯಾರ್ಥಿಗಳು ಸೆರೆಗೀಡಾಗಿದ್ದಾರೆ. ತೃಕರಿಪುರದ ಮುಹಮ್ಮದ್ ಉವೈಸ್ (19), ಪಯ್ಯನ್ನೂರಿನ ರೋಹನ್ ರನೂಶ್ (19), ಕಣ್ಣೂರಿನ ನಶೀದ್ ಅಮೀರ್ (19), ಪಯ್ಯನ್ನೂರು ಎಟ್ಟಿಕುಳದ ಎಂ.ಪಿ. ರೈಹಾನ್ (19), ಕಲ್ಲಿಕೋಟೆಯ ಮುಹಮ್ಮದ್ ಆದಿಲ್ (19) ಎಂಬಿವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಇತರ ನಾಲ್ವರಿಗಾಗಿ ಶೋಧ ನಡೆಯುತ್ತಿದೆ.

ತೃಶೂರು ಚಾವಕ್ಕಾಡ್ ನಿವಾಸಿಯೂ  ಮಂಗಳೂರು ಪಾಂ ಡೇಶ್ವರದಲ್ಲಿ ಕಾಲೇಜು ವಿದ್ಯಾರ್ಥಿ ಯಾದ ಅಮೀರ್ ಅಲಿ ನೀಡಿದ ದೂರಿನಂತೆ ದಾಖಲಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ದೂರು ನೀಡಿದ ಅಮೀರ್ ಅಲಿ ಹಾಗೂ ಸಹಪಾಠಿ ಅರ್ಫಾಸ್ ಕಾಲೇಜಿನಿಂದ ವಾಸಸ್ಥಳಕ್ಕೆ ತೆರಳುತ್ತಿದ್ದಾಗ ಬೈಕ್‌ಗಳಲ್ಲಿ ತಲುಪಿದ 

RELATED NEWS

You cannot copy contents of this page