ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಒಂದೇ ದಿನ ಎರಡು ಸ್ಕೂಟರ್‌ಗಳನ್ನು ಕಳವುಗೈದ ಆರೋಪಿಯನ್ನು ಪೊಲೀಸರು ಅತೀ ಸಾಹಸದಿಂದ ಸೆರೆಹಿಡಿದಿದ್ದಾರೆ. ತಲಪ್ಪಾಡಿ ನಿವಾಸಿ ಸುನಿಲ್ (32) ಎಂಬಾತ ಕಸ್ಟಡಿಯಲ್ಲಿರುವ ಆರೋಪಿ.
ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ನೇತೃತ್ವದಲ್ಲಿ ಎಸ್‌ಐಗಳಾದ ಶಬರಿಕೃಷ್ಣನ್, ಅರ್ಜುನ್ ಅರವಿಂದನ್ ಎಂಬಿವರು ನಾಗರಿಕರ ಸಹಾಯದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಈತನನ್ನು ಸಮಗ್ರ ತಪಾಸಣೆಗೊಳಪಡಿ ಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಸುನಿಲ್ ಕಳವಿಗಾಗಿ ತಲುಪಿದ ಸ್ಕೂಟರ್‌ನ್ನು ಕಸ್ಟಡಿಗೆ ತೆಗೆಯಲಾಗಿದೆ. ಉದ್ಯಾವರದ ಅಬ್ದುಲ್ ರಹಿಮಾನ್ ಖಾದರ್ ಎಂಬವರ ಸ್ಕೂಟರ್ ಸೆಪ್ಟಂಬರ್ 20ರಂದು ಮಧ್ಯಾಹ್ನ 12 ಗಂಟೆಗೆ ಉದ್ಯಾವರದಿಂದ ಕಳವಿಗೀಡಾಗಿತ್ತು. ಇವರು ಉದ್ಯಾವರ ಕರೋಡ ಅಂಡರ್ ಪಾಸ್ ಬಳಿಯ ಸಹೋದರಿಯ ಮನೆ ಸಮೀಪ ಸ್ಕೂಟರ್ ನಿಲ್ಲಿಸಿದ್ದರು. ಅಲ್ಲಿಂದ ಅದು ಕಳವಿಗೀಡಾಗಿತ್ತು. ಈ ಬಗ್ಗೆ ಅವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅದೇ ದಿನ ಪೊಸೋಟ್‌ನಿಂದ ಮಲಪ್ಪುರಂ ನಿವಾಸಿಯಾದ ಶಮ್ನಾದ್ ಅಲಿ ಸುಲೈಮಾನ್ ಎಂಬವರ ಸ್ಕೂಟರ್ ಕಳವಿಗೀಡಾಗಿತ್ತು. ಈ ಬಗ್ಗೆಯೂ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು. ತನಿಖೆಯಂಗವಾಗಿ ವಿವಿಧೆಡೆಗಳ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಸ್ಕೂಟರ್ ಕಳ್ಳನ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕರ್ನಾಟಕ ನೋಂದಾವಣೆಯ ಸ್ಕೂಟರ್‌ನಲ್ಲಿ ಕಳ್ಳ ತಲುಪಿದ್ದನು. ಈ ಸ್ಕೂಟರ್‌ನ್ನು ಬೇರೆಡೆ ನಿಲ್ಲಿಸಿ ಬೇರೆ ಸ್ಕೂಟರ್ ಕಳವುಗೈದು ಸಾಗಿಸಿರುವುದಾಗಿ ತಿಳಿದುಬಂದಿತ್ತು. ಎರಡೂ ಸ್ಕೂಟರ್‌ಗಳನ್ನು ಇದೇ ರೀತಿ ಈತ ಕದ್ದೊಯ್ದಿದ್ದನು. ಅನಂತರ ಬಸ್‌ನಲ್ಲಿ ತಲುಪಿ ತಾನು ಕಳವಿಗಾಗಿ ಬಂದ ಸ್ಕೂಟರ್‌ನ್ನು ಕೊಂಡೊಯ್ಯುವುದು ಈತನ ರೀತಿಯಾಗಿದೆ. ಇದರಿಂದ ಕಳವಿಗಾಗಿ ಆರೋಪಿ ತಲುಪಿದ ಸ್ಕೂಟರ್‌ನ ನಂಬ್ರ ಗುರುತಿಸಿಕೊಂಡ ಪೊಲೀಸರು ಬಳಿಕ ಮಫ್ತಿ ವೇಷದಲ್ಲಿ ತಲುಪಿ ನಾಗರಿಕರ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಕಳವಿಗೀಗಾಗಿ ತಲುಪಿದ ಸ್ಕೂಟರ್ ಕೊಂಡೊ ಯ್ಯಲು ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಆರೋಪಿ ತಪ್ಪೊಪ್ಪಿಕೊಂ ಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.






