ಉಪ್ಪಳ: ಹೊಳೆಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ನಿವಾಸಿ ಶ್ಯಾಮ್ ಲಾಲ್ ಬರ್ಮನ್ ಎಂಬವರ ಪುತ್ರ ಬಿಸ್ವಾಸ್ ಬರ್ಮನ್ ( 21) ಮೃತಪಟ್ಟ ದುರ್ದೈವಿ. ಬಿಸ್ವಾಸ್ ಹಾಗೂ ಇತರ ಇಬ್ಬರು ನಿನ್ನೆ ಮಧ್ಯಾಹ್ನ 11.30ರ ವೇಳೆ ವಾಮಂಜೂರು ಚೆಕ್ ಪೋಸ್ಟ್ ಬಳಿಯ ಉಪ್ಪಳ ಹೊಳೆಯಲ್ಲಿ ಸ್ನಾನಕ್ಕಾಗಿ ತೆರಳಿದ್ದರು. ಬಿಸ್ವಾಸ್ ಹಾಗೂ ಇನ್ನೋರ್ವ ಹೊಳೆಯ ಅಣೆಕಟ್ಟು ಸಮೀಪ ಸ್ನಾನಕ್ಕಾಗಿ ಇಳಿದಿದ್ದು ಓರ್ವ ದಡದಲ್ಲಿ ನಿಂತಿದ್ದನು. ಸ್ನಾನ ಮಾಡುತ್ತಿದ್ದಂತೆ ಬಿಸ್ವಾಸ್ ನೀರಿನಲ್ಲಿ ಮುಳುಗಿದ್ದಾನೆ. ಜತೆಗಿದ್ದವರು ಕೂಡಲೇ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ . ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸ್ ಹಾಗೂ ಉಪ್ಪಳ, ಕಾಸರಗೋಡಿನಿಂದ ತಲುಪಿದ ಅಗ್ನಿ ಶಾಮಕ ದಳ ತಲುಪಿ ಶೋಧ ನಡೆಸಿದಾಗ ಸುಮಾರು ಮೂರು ಗಂಟೆ ಬಳಿಕ ಮೃತದೇಹ ಪತ್ತೆಯಾಗಿದೆ . ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಂದು ಊರಿನಿಂದ ಸಂಬAಧಿಕರು ತಲುಪಲಿ ದ್ದಾರೆನ್ನಲಾಗಿದೆ. ಘಟನೆ ನಡೆದ ಹೊಳೆಯ ಸಮೀಪದಲ್ಲಿರುವ ಮಾರ್ಬಲ್ ಸಂಸ್ಥೆಯ ಕಟ್ಟಡದಲ್ಲಿ ಬಿಸ್ವಾಸ್ ವಾಸಿಸಿ ಸೆಂಟ್ರಿAಗ್ ಕೆಲಸಕ್ಕೆ ತೆರಳುತ್ತಿದ್ದನು.






