ಮನೆ ಮುಂದೆ ನಿಲ್ಲಿಸಿದ್ದ  ಸಿಪಿಎಂ ಕಾರ್ಯಕರ್ತನ ಸ್ಕೂಟರ್‌ಗೆ ಬೆಂಕಿ

ಕಾಸರಗೋಡು: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಬೆಂಕಿ ತಗಲಿ ನಾಶಗೊಂಡ ಸ್ಥಿತಿಯಲ್ಲಿ ಪತ್ತೆಯಾ ಗಿದೆ. ನೀಲೇಶ್ವರ ಕೋಯಾಬುರಂ ಇಟ್ಟುಪಾರದ ಸಿಪಿಎಂ ಕಾರ್ಯ ಕರ್ತ ಪ್ರಕಾಶನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟರ್  ಬೆಂಕಿಗಾಹುತಿಯಾಗಿದೆ. ಯಾರೋ ದುಷ್ಕರ್ಮಿಗಳು ಇದಕ್ಕೆ ಕಿಚ್ಚಿರಿಸಿರಬಹುದೆಂದು ಶಂಕಿಸಲಾಗುತ್ತಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಈ ಬಗ್ಗೆ ನೀಡಲಾದ ದೂರಿನಂತೆ ನೀಲೇಶ್ವರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ವಿಷಯ ತಿಳಿದ ನಗರಸಭಾ ಕೌನ್ಸಿಲರ್ ಸೇರಿದಂತೆ ಹಲವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸಮಗ್ರ ತನಿಖೆ ನಡೆಸಬೇಕೆಂದು ಕೌನ್ಸಿಲರ್ ಆಗ್ರಹಪಟ್ಟಿದ್ದಾರೆ.

You cannot copy contents of this page