ಕುಂಬಳೆ: ಶಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಅಪಘಾತಕ್ಕೀಡಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಗಳೂರು ಪೆರ್ಮುದೆ ಕಟೀಲಿನ ಜೋಸೆಫ್ ಡಿಸೋಜ (52) ಗಾಯ ಗೊಂಡ ವ್ಯಕ್ತಿ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ರಾತ್ರಿ 7.45ರ ವೇಳೆ ಅಫಘಾತ ಉಂಟಾಗಿದೆ. ಬೇಳದಲ್ಲಿರುವ ಸಂಬಂಧಿಕನ ಮನೆಗೆ ಭೇಟಿ ನೀಡಿ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಶಿರಿಯಕ್ಕೆ ತಲುಪಿದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಾಷ್ಟ್ರೀಯ ಹೆದ್ದಾರಿಯ ಸಂರಕ್ಷಣಾ ಗೋಡೆಗೆ ಬಡಿದು ಮಗುಚಿ ಬಿದ್ದಿದೆ.






