ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಕೊಚ್ಚಿ ನಗರದ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕೇರಳ-ಕರ್ನಾಟಕ ಜಾನಪದ ಉತ್ಸವ’ ಜರುಗಿತು. ಈ ಸಮಾರಂಭದಲ್ಲಿ ಕಜಾಪ ಕೇರಳ ಗಡಿನಾಡ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಕೃತಿ ಬಿಡುಗಡೆ, ಬಹುಭಾಷಾ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ನೆರವೇರಿತು.
ಮಾಜಿ ಶಾಸಕ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಎರ್ನಾಕುಳಂ ಶಾಸಕ ಟಿ.ಜೆ. ವಿನೋದ್ ಡೋಲು ಬಾರಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯತೆಯ ಕುರಿತು ಬೆಳಕು ಚೆಲ್ಲಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇರಳ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ‘ಕಲೆ, ಸಾಹಿತ್ಯ ಮತ್ತು ಜಾನಪದ ಸಂಸ್ಕೃತಿಗೆ ಭೌಗೋಳಿಕ ಗಡಿಗಳ ಹಂಗಿಲ್ಲ. ಕರ್ನಾಟಕ ಮತ್ತು ಕೇರಳ ರಾಜ್ಯಗಳು ಶತಮಾನಗಳಿಂದಲೂ ಅವಿನಾಭಾವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಹಂಚಿಕೊAಡು ಬಂದಿವೆ. ಭಾಷೆ ಮತ್ತು ಭೂಪ್ರದೇಶ ಬೇರೆಯಾಗಿದ್ದರೂ ಜನಪದ ಕಲೆಗಳು ಮಾನವೀಯ ಮೌಲ್ಯಗಳನ್ನು ಮತ್ತು ಪರಸ್ಪರ ಪ್ರೀತಿಯನ್ನು ಬೆಸೆಯುವ ಶಕ್ತಿ ಹೊಂದಿವೆ. ಗಡಿನಾಡಿನಲ್ಲಿ ಇಂತಹ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಉಭಯ ರಾಜ್ಯಗಳ ಜನರ ನಡುವೆ ಭ್ರಾತೃತ್ವ ಹಾಗೂ ಸೌಹಾರ್ದತೆ ಇನ್ನಷ್ಟು ಗಟ್ಟಿಯಾಗುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖ ಸಾಧಕರಾದ ಡಾ. ಶಿವರಾಮ ಕೆ. ಭಂಡಾರಿ, ಪ್ರಸನ್ನ ಕುಮಾರ್, ಡಾ. ಸಂದೀಪ್ ಪುರಂದರ ಶೆಟ್ಟಿ, ಎಸ್. ಜಗದೀಶ್ ಚಂದ್ರ ಅಂಚನ್, ಶಾಫಿ ಎಂ. ಬಂಡಸಾಲೆ ಮತ್ತು ರಾಘವ ಚೇರಾಲ್‌ರಿಗೆ ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಜೊತೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಅವರನ್ನು ಗೌರವಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಕರ್ನಾಟಕ-ಕೇರಳ ಪೆsÆÃಕ್ ಆರ್ಟ್-ಕಲ್ಚರಲ್ ಹೆರಿಟೇಜ್ ಇನ್ನೋವೇಶನ್ ಸೆಂಟರ್‌ನ ನೀಲನಕ್ಷೆ ಯನ್ನು ಸಚಿವರು ಅನಾವರಣ ಗೊಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಅಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಕಜಾಪ ಕೇರಳ ಘಟಕದ ನೂತನ ಸಾರಥಿಗಳ ಪದಗ್ರಹಣವನ್ನು ಅಧಿಕೃತವಾಗಿ ಘೋಷಿಸಿ ಶುಭ ಹಾರೈಸಿದರು. ಲೇಖಕಿ, ಪ್ರಾಧ್ಯಾಪಿಕೆ ಲಕ್ಷ್ಮೀ ಮಹೇಶ್ ರಾಜು ಅವರ ‘ಇಲ್ಲಿ-ಇಂತು-ಹೀಗೆ’ ಕವನ ಸಂಕಲನ ವನ್ನು ಗಣ್ಯರು ಲೋಕಾರ್ಪಣೆಗೊಳಿಸಿ ದರು. ಕವಯಿತ್ರಿ ಲಕ್ಷ್ಮಿ ಕೆ. ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಕರ್ನಾಟಕ ಸರಕಾರದ ಕನಿಷ್ಠ ವೇತನ ಆಯೋಗದ ಸದಸ್ಯ ಟಿ.ಎಂ.ಶಹೀದ್, ಕಸಾಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಗಡಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ ಖ್ಯಾಡೇದ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸದಸ್ಯ ಎನ್. ಚನಿಯಪ್ಪ ನಾಯ್ಕ್, ಕೊಚ್ಚಿ ಚಂಗಪ್ಪುಝ ಸಾಂಸ್ಕೃತಿಕ ವೇದಿ ಸದಸ್ಯ ಟಿ.ಜಿ. ರವಿಕುಮಾರ್, ಗಮಕ ಕಲಾಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಟಿ. ಶಂಕರನಾರಾಯಣ ಭಟ್, ಸಮಾಜ ಸೇವಕ ಸಿದ್ದೀಕ್ ಪಚ್ಚಂಬಳ ಉಪಸ್ಥಿತರಿದ್ದರು.
ಕಜಾಪ ಕೇರಳ ಘಟಕಾಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್. ನಾಸಿ ಸ್ವಾಗತಿಸಿ, ಕಜಾಪ ಕೇರಳ ಘಟಕದ ಪ್ರಧಾನ ಕಾರ್ಯ ದರ್ಶಿ ರವಿ ನಾಯ್ಕಾಪು ನಿರೂಪಿಸಿ, ವಂದಿಸಿದರು. ವಿವಿಧ ಕಲಾತಂಡಗಳಿAದ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರದರ್ಶನಗೊಂಡಿತು.






