ಪೆರ್ಲ: ಪೆರ್ಲ ಪೇಟೆಯಲ್ಲಿ ನಿನ್ನೆ ಹಾಡಹಗಲೇ ಅಂಗಡಿಯೊಂದರಿಂದ ವ್ಯಕ್ತಿಯೋರ್ವ 7 ಸಾವಿರ ರೂಪಾಯಿ ಕಳವುಗೈದ ಘಟನೆ ವರದಿಯಾಗಿದೆ. ಕೆಳಗಿನ ಪೇಟೆಯ ಬಜಕೂಡ್ಲು ರಸ್ತೆ ಸಮೀಪವಿರುವ ಅಂಗಡಿಯಿಂದ ಹಣ ಕಳವು ನಡೆದಿದೆ. ಅಂಗಡಿಯ ಮಾಲಕ ಸಮೀಪದ ಬೇರೊಂದು ಅಂಗಡಿಗೆ ತೆರಳಿ ಅಲ್ಪ ಹೊತ್ತಿನಲ್ಲೇ ಮರಳಿದ್ದು ಈ ವೇಳೆ ಡ್ರಾವರ್ನಲ್ಲಿದ್ದ 7 ಸಾವಿರ ರೂಪಾಯಿ ನಾಪತ್ತೆಯಾ ಗಿತ್ತು. ಇದರಿಂದ ಸಮೀಪದ ಸಿಸಿ ಟಿವಿ ಪರಿಶೀಲಿಸಿದಾಗ ಪ್ಯಾಂಟ್, ಶರ್ಟ್ ಧರಿಸಿರುವ ವ್ಯಕ್ತಿಯೋರ್ವ ಅಂಗಡಿಗೆ ನುಗ್ಗಿ ಡ್ರಾವರ್ನಿಂದ ಹಣ ತೆಗೆದು ಪರಾರಿಯಾಗುವ ದೃಶ್ಯ ಕಂಡುಬಂದಿದೆ.






