ವಿಧಾನಸಭೆಯಲ್ಲಿ ರೌದ್ರತಾಂಡವ ಪ್ರಕರಣ ವಿಚಾರಣೆ ನ.3ರಿಂದ

ತಿರುವನಂತಪುರ: ಪ್ರಜಾತಂತ್ರದ ದೇಗುಲವೆಂದೇ  ವಿಶ್ಲೇಷಿಸಲಾಗುವ ವಿಧಾನಸಭೆ ಯಲ್ಲಿ 11 ವರ್ಷಗಳ ಹಿಂದೆ ನಡೆದ ರಾಜ್ಯವನ್ನು ಬೆಚ್ಚಿಬೀಳಿಸಿದ   ರೌದ್ರತಾಂಡವ  ಪ್ರಕರಣದ ವಿಚಾರಣೆ ನ.೩ರಿಂದ ತಿರುವನಂತಪುರ ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ. ಇದು ಸಿಪಿಎಂನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸುವಂತೆ ಮಾಡಿದೆ.

ಈ ಪ್ರಕರಣದಲ್ಲಿ ಮಾಜಿ ಸಚಿವರುಗಳಾದ ವಿ. ಶಿವನ್ ಕುಟ್ಟಿ, ಕೆ.ಟಿ. ಜಲೀಲ್, ಅಂದು ಎಡರಂಗ ಸಂಚಾಲಕರಾಗಿದ್ದ ಮಾಜಿ ಸಚಿವ ಇ.ಪಿ. ಜಯರಾಜನ್, ಮಾಜಿ ಶಾಸಕರಾದ  ಕೆ. ಅಜಿತ್, ಕೆ. ಕುಂಞಹಮ್ಮದ್, ಸಿ.ಕೆ. ಸದಾಶಿವನ್ ಮೊದಲಾದವರು ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಗಿ ಬರಲಿದೆ.  ಅಂದು  ರಾಜ್ಯ ವಿಧಾನಸ ಭೆಯ ಕಾರ್ಯದರ್ಶಿ ಯಾಗಿದ್ದ ಪಿ.ಡಿ. ಶಾರ್ಧಾಂಗರ ಈ ಪ್ರಕರಣದ ಒಂದನೇ ಸಾಕ್ಷಿದಾರರಾಗಿದ್ದು,  ವಿಚಾರಣೆ ವೇಳೆ ಅವರ ಹೇಳಿಕೆಯನ್ನು ನ್ಯಾಯಾಲಯ ಮೊದಲು ದಾಖಲಿಸಿಕೊಳ್ಳಲಿದೆ.

ಈ ಹಿಂದಿನ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ  ಅಂದು ರಾಜ್ಯ ಹಣಕಾಸು ಸಚಿವರಾಗಿದ್ದ ಕೆ.ಎಂ. ಮಾಣಿ 2015ರಲ್ಲಿ  ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡನೆಗಾಗಿ ಆಗಮಿಸಿದ್ದ ವೇಳೆ ಮದ್ಯ ಬಾರ್‌ಗಳಿಗೆ ಲೈಸನ್ಸ್ ನೀಡುವ ಹೆಸರಲ್ಲಿ ಅವರು ಲಂಚ ಸ್ವೀಕರಿಸಿದ್ದಾರೆಂದು ಆರೋಪಿಸಿ ಅಂದು ವಿಪಕ್ಷದಲ್ಲಿದ್ದ ಸಿಪಿಎಂನ ಕೆಲವು ಶಾಸಕರು ಸೇರಿ   ಸದನದಲ್ಲಿ ಬಜೆಟ್ ಮಂಡನೆಗೆ ತಡೆಯೊಡ್ಡಿದ್ದರು. ಆ ವೇಳೆ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷೀಯರ ಮಧ್ಯೆ ನೂಕುನುಗ್ಗಲು ಮತ್ತು ಪರಸ್ಪರ ಹೊಕೈ ನಡೆಯಿತು. ಆ ಸಂದರ್ಭದಲ್ಲಿ ಸಿಪಿಎಂನ ಕೆಲವು ಜನಪ್ರತಿಧಿನಿಧಿಗಳು ವಿಧಾನಸಭಾ ಅಧ್ಯಕ್ಷರ ಪೀಠಕ್ಕೇರಿ ಪೀಠ ಮತ್ತು ಧ್ವನಿವರ್ಧಗಳನ್ನು ಒಡೆದು ಹಾಕಿ ಹಾನಿಗೊಳಿಸಿದ್ದಾರೆಂದು   ಆರೋ ಪಿಸಲಾಗಿದೆ.

ಅದರಿಂದ 2,20,093 ರೂ.ಗಳ ಸಾರ್ವಜನಿಕ ಆಸ್ತಿ ನಷ್ಟಗೊಂಡಿದೆಯೆಂದು ತಿಳಿಸಿ  ನೀಡಲಾದ ದೂರಿನಂತೆ ತಿರುವನಂತಪುರ ಮ್ಯೂಸಿಯಂ ಪೊಲೀಸರು ಸಿಪಿಎಂನ ಹಲವು ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಅಧಿಕಾರಕ್ಕೇರಿದ  ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಮೊದಲು ವಿಚಾರಣಾ ನ್ಯಾಯಾಲ ಯಕ್ಕೂ ನಂತರ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿತ್ತು.  ಆದರೆ ಆ ಎರಡೂ ನ್ಯಾಯಾಲಯಗಳು ಎಡರಂಗ ಸರಕಾರದ ಬೇಡಿಕೆಯನ್ನು ತಿರಸ್ಕರಿಸಿದ್ದವು. ಇದರಿಂದಾಗಿ ಈ ಪ್ರಕರಣದ ವಿಚಾರಣೆ ಕ್ರಮಗಳು  ಈಗ ಸುಗಮಗೊಳ್ಳುವಂತೆ ಮಾಡಿದೆ.

You cannot copy contents of this page