ಪಿಲಿಕ್ಕೋಡ್ ಉಪ ಚುನಾವಣೆ: ಎಡರಂಗ ಅಭ್ಯರ್ಥಿಗೆ ಜಯ

ಕಾಸರಗೋಡು: ಪಿಲಿಕ್ಕೋಡ್ ಪಂಚಾಯತ್ ದ್ವಿತೀಯ ವಾರ್ಡ್‌ಗೆ  ನಡೆದ ಉಪ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ 297 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಮತದಾನದಲ್ಲಿ 81.13 ಶೇ. ಮಂದಿ ಭಾಗವಹಿಸಿದ್ದರು. ಒಟ್ಟು 903 ಮಂದಿ ಮತ ಚಲಾಯಿಸಿದ್ದು, ಐಕ್ಯರಂಗದ ಅಭ್ಯರ್ಥಿ ಕೆ. ಸಂಧ್ಯಾ 294 ಮತ, ಬಿಜೆಪಿ ಅಭ್ಯರ್ಥಿ ಉಮಾದೇವಿ 18 ಮತ ಗಳಿಸಿದ್ದಾರೆ. ಈ ಬಾರಿ ಬಿಜೆಪಿಗೆ ಮತ ಕಡಿಮೆ ಲಭಿಸಿದೆ. ಕಳೆದ ವರ್ಷ 60 ಮತಗಳು ಲಭಿಸಿತ್ತು.

You cannot copy contents of this page