ಇಂದಿನಿಂದ ಮಂಗಳೂರು -ಮೈಸೂರು ರೈಲ್ವೇ ವಿಭಾಗೀಯ ವಲಯಕ್ಕೆ ಸೇರ್ಪಡೆ

ಕಾಸರಗೋಡು: ಪಾಲಕ್ಕಾಡ್ ರೈಲ್ವೇ ವಿಭಾಗೀಯ ವಲಯದಿಂದ ಮಂಗಳೂರು ಬೇರ್ಪಡಿಸಿ ಇಂದು ತಡರಾತ್ರಿಯಿಂದ ಮೈಸೂರು ರೈಲ್ವೇ ವಿಭಾಗೀಯ ವಲಯಕ್ಕೆ ವಿದ್ಯುಕ್ತವಾಗಿ ಸೇರ್ಪಡೆಗೊಳ್ಳಲಿದೆ. ಪಾಲಕ್ಕಾಡ್ ವಿಭಾಗೀಯ ವಲಯದಿಂದ ಮಂಗಳೂರನ್ನು ಬೇರ್ಪಡಿಸಿ ಅದನ್ನು ಮೈಸೂರು ವಲಯಕ್ಕೆ ಸೇರಿಸಿ ಸೇರ್ಪಡೆಗೊಳಿಸುವ ರೈಲ್ವೇ ಇಲಾಖೆಯ ತೀರ್ಮಾನವನ್ನು ವಿರೋಧಿಸಿ ಕೇರಳ ಸರಕಾರ, ಕೇರಳದ ಜನಪ್ರತಿನಿಧಿಗಳು ಹಾಗೂ ಪ್ರಯಾಣಿಕರು ತೀವ್ರವಾಗಿ ವಿರೋಧಿಸಿ ಹೋರಾಟ ನಡೆಸಿದರೂ ಅದೆಲ್ಲ ಈಗ ವ್ಯರ್ಥಗೊಂಡಿದೆ.

ಮಂಗಳೂರನ್ನು ಬೇರ್ಪಡಿಸಿ ಅದನ್ನು  ಮೈಸೂರು ವಲಯಕ್ಕೆ ಸೇರ್ಪಡೆಗೊಳಿಸುವ ಒಡಂಬಡಿಕೆಗೆ ಪಾಲಕ್ಕಾಡ್ ಹಾಗೂ ಮೈಸೂರು ರೈಲ್ವೇ ವಿಭಾಗೀಯ ಕಚೇರಿಯ ಉನ್ನತ ಅಧಿಕಾರಿಗಳು ಈಗಾಗಲೇ ಸಹಿ ಹಾಕಿದ್ದಾರೆ. ಆದರೆ ಈ ತೀರ್ಮಾನ ದಿಂದ ಮಂಗಳೂರಿನಿಂದ ಕೇರಳ ಹಾಗೂ ಕೇರಳದಿಂದ ಮಂಗಳೂರಿಗೆ ಸೇವೆ ನಡೆಸುತ್ತಿರುವ ಯಾವುದೇ ರೈಲುಗಳ ಸೇವಾ ಸಮಯಲ್ಲಿ  ಬದಲಾವಣೆ ಉಂಟಾಗದೆಂದು ರೈಲ್ವೇ ಇಲಾಖೆ ತಿಳಿಸಿದೆ. ಮಂಗಳೂರು ವಲಯದಿಂದ ಕೇರಳಕ್ಕೆ ರೈಲು ಮಾರ್ಗದ ಮೂಲಕ ಸರಕು ಪೂರೈಕೆ ಇಂದು ರಾತ್ರಿಯಿಂದ ನಿಲುಗಡೆಗೊ ಳ್ಳಲಿದೆ. ಇದು ಕೇರಳಕ್ಕೆ ಭಾರೀ ಆರ್ಥಿಕ ನಷ್ಟ ಉಂಟುಮಾಡಲಿದೆ. ಮಾತ್ರವಲ್ಲ ಪಾಲಕ್ಕಾಡ್ ರೈಲ್ವೇ ವಿಭಾಗ ಇನ್ನು ತನ್ನ ಪ್ರಸಕ್ತಿ ಕಳೆದುಕೊಳ್ಳಲಿದೆ ಎಂದು ಕೇರಳ ಸರಕಾರ ಹಾಗೂ ಕೇರಳದ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಯತ್ನವನ್ನು ಕೈಬಿಡಬೇಕೆಂದು  ಆಗ್ರಹಿಸಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಕೇರಳದ ಸಂಸದರು ರೈಲ್ವೇ ಸಚಿವರನ್ನು ನೇರವಾಗಿ ಸಂದರ್ಶಿಸಿ ಬೇಡಿಕೆ ಸಲ್ಲಿಸಿದ್ದರು. ಆ ಪ್ರಯತ್ನ ಈಗ ವಿಫಲಗೊಂಡಿದೆ.

RELATED NEWS

You cannot copy contents of this page