ನೀರು ತುಂಬಿದ್ದ ಬಕೆಟ್ ಬಿದ್ದು ಇಬ್ಬರು ಮಕ್ಕಳು ಮೃತ್ಯು

ಪಾಲಕ್ಕಾಡ್:  ಸಹೋದರ ರಾದ ಇಬ್ಬರು ಮಕ್ಕಳು ಬಚ್ಚಲು ಕೋಣೆಯಲ್ಲಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ವಡಕರಪದಿ ಮಣಲ್ಕಾಡ್ ಎಂಬಲ್ಲಿನ ಜೋನ್ ಕುಮಾರ್ -ನಿವೇದ್ಯ ದಂಪತಿಯ ಮಕ್ಕಳಾದ ಜೆನಿಫರ್ ಜ್ಯೂಲಿಯೆಟ್ (5), ರೋಬಿನ್ ಕ್ರಿಷ್ಟಫರ್ (3) ಎಂಬಿ ವರು ಮೃತಪಟ್ಟ ದುರ್ದೈವಿಗಳಾಗಿ ದ್ದಾರೆ. ನಿನ್ನೆ ಬೆಳಿಗ್ಗೆ ಕೊಳಿಂಞಾಂ ಬಾರ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಆಟವಾಡುತ್ತಿದ್ದ ವೇಳೆ ಮಕ್ಕಳು ನೀರು ತುಂಬಿದ್ದ ಬಕೆಟ್‌ಗೆ ಬಿದ್ದಿರಬಹುದೆಂದು  ಅಂದಾಜಿ ಸಲಾಗಿದೆ. ಅದನ್ನು ಕಂಡ ಸ್ಥಳೀಯರು ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. 

RELATED NEWS

You cannot copy contents of this page