ಮೀಯಪದವು: ಮೀಂಜ ಪಂಚಾಯತ್ ವ್ಯಾಪ್ತಿಯ ದುರ್ಗಿಪಳ್ಳ, ಅರಿಯಾಳ, ಬÁಳಿಯೂರು, ಬೆಜ್ಜ, ಮಜಿಬೈಲ್ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಮೀಂಜ ಪಂಚಾಯತ್ ಬಿಜೆಪಿ ಸದಸ್ಯೆ ಹಾಗೂ ಬ್ಲಾಕ್ ಸದಸ್ಯೆಯ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೆ. ಸುರೇಂದ್ರನ್‌ರ ಮೂಲಕ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಅದೇ ರೀತಿ ಫಸಲ್ ಭೀಮ ಯೋಜನೆ ಇನ್‌ಶೂರೆನ್ಸ್ ತಾಂತ್ರಿಕ ಕಾರಣ ಹೇಳಿ ನಷ್ಟ ಪರಿಹಾರ ತಡೆ ಹಿಡಿದಿರುವುದನ್ನು ಕೂಡಲೇ ಸರಿ ಪಡಿಸಬೇಕೆಂದು ಮನವಿ ನೀಡಲಾಯಿತು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ, ನೇತಾರ ರಾದ ವಿಜಯ್ ಕುಮಾರ್ ರೈ, ಬೆಜ್ಜ ಚಂದ್ರಹಾಸ, ಕೆ.ವಿ ಭಟ್, ನವೀನ್ ಬೆಜ್ಜ ಸದಸ್ಯರಾದ ಲತೀಶ್ ಮಜಿಬೈಲ್, ಮೋಹನ್, ಶಾಂತ ಕುಮಾರಿ, ಕೃಷ್ಣ ಬೆಜ್ಜ, ಸಂಧ್ಯಾ ಜ್ಯೋತಿ ರೈ, ಶಾಲಿನಿ ಶೆಟ್ಟಿ ಉಪಸ್ಥಿತರಿದ್ದರು.






