ಪಾಲಕ್ಕಾಡ್: ಕೊಳಿಂಙಂಬಾರ, ಮೇನೋನ್‌ಪ್ಪಾರ ಎಂಬಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕೊಲೆಕೃತ್ಯವಾಗಿz ಯೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮಕ್ಕಳ ತಾಯಿ ನಿವೇ ದ್ಯಳೇ ಈ ಕೊಲೆ ಕೃತ್ಯ ನಡೆಸಿದ್ದಾಳೆಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ನಡೆಸಿದ ಮಾಹಿತಿ ಸಂಗ್ರಹ ವೇಳೆ ಮೋಡಲಿಂಗ್ ಆಗಲು ಆಗ್ರಹಿಸಿರುವುದಾ ಗಿಯೂ, ಅದಕ್ಕೆ ತಡೆಯಾಗುವರೆಂದು ಭಾವಿಸಿ ಮಕ್ಕಳನ್ನು ತಾನು ಕೊಲೆಗೈದಿರು ವುದಾಗಿ ನಿವೇದ್ಯ ಹೇಳಿಕೆ ನೀಡಿದ್ದಾಳೆ. ಹೆಚ್ಚು ಕಲಿಯಲು ಆಗ್ರಹಿಸಿದ್ದೆ. ಮಕ್ಕಳಿ ರುವುದರಿಂದ ಅದು ಸಾಧ್ಯವಾಗಲಿಲ್ಲ ವೆಂದು ಆಕೆ ತಿಳಿಸಿದ್ದಾಳೆ. ಮಕ್ಕಳಿರುವು ದರಿಂದಾಗಿ ಸ್ವತಂತ್ರವಾಗಿ ಬದುಕುವುದಕ್ಕೆ ತಡೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಕ್ರೂರ ಕೃತ್ಯ ನಡೆಸಿರುವುದಾಗಿಯೂ ನಿವೇದ್ಯ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಮಕ್ಕಳ ಬಗ್ಗೆ, ಪತಿಯ ಬಗ್ಗೆ ಹಲವರು ಅಪವಾದ ಪ್ರಚಾರ ನಡೆಸಿದ್ದು, ಮಕ್ಕಳು ತನ್ನದಲ್ಲವೆಂಬ ರೀತಿಯಲ್ಲಿ ಪ್ರಚಾರ ಮಾಡಿರುವುದಾಗಿಯೂ ನಿವೇದ್ಯ ಪೊಲೀಸರಲ್ಲಿ ತಿಳಿಸಿದ್ದಾಳೆ. ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೈ ಯ್ಯಲು ಯತ್ನಿಸಿರುವುದಾ ಗಿಯೂ ಆಕೆ ತಿಳಿಸಿದ್ದಾಳೆ. ಆದರೆ ಈ ವಿಷಯಗಳಲ್ಲಿ ಪೊಲೀಸರು ಪೂರ್ಣ ವಿಶ್ವಾಸ ಹೊಂದಿಲ್ಲ.
ಮಂಗಳವಾರ ಬೆಳಿಗ್ಗೆ ೧೦.೩೦ರ ವೇಳೆ ಮೇನೋನ್‌ಪ್ಪಾರ ಪುರಂಗಾಟಿಲ್ ನಲ್ಲಿನ ಬಾಡಿಗೆ ಮನೆಯಲ್ಲಿ ಅವಳಿ ಕೊಲೆಕೃತ್ಯ ನಡೆದಿತ್ತು ಜೋನ್ ಕುಮಾರ್ ಹಾಗೂ ನಿವೇದ್ಯ ದಂಪತಿಯ ಮಕ್ಕಳಾದ ಜೆನ್ನಿಫರ್ ಜೂಲಿಯೆಟ್ (5), ರೋಬಿನ್ ಕ್ರಿಸ್ಟಫರ್ (3) ಎಂಬಿವರನ್ನು ಕೊಲೆಗೈಯ್ಯಲಾಗಿತ್ತು. ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಲೆಗೈದಿರುವುದು ತಾನೆಂದು ನಿವೇದ್ಯ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾಳೆ. ದಂಪತಿ ಮಧ್ಯೆ ದಿನಂಪ್ರತಿ ಜಗಳ ಉಂಟಾಗುತ್ತಿತ್ತೆಂದು ನೆರೆಮನೆ ನಿವಾಸಿಗಳು ಪೊಲೀಸರಲ್ಲಿ ತಿಳಿಸಿದ್ದಾರೆ. ನಿವೇದ್ಯ ಅಪರಿ ಮಿತವಾಗಿ ಫೋನ್ ಉಪಯೋಗಿಸುತ್ತಿರು ವುದನ್ನು ಜೋನ್ ಕುಮಾರ್ ವಿರೋಧಿಸಿ ದ್ದನು. ಕೊಲೆ ಕೃತ್ಯಕ್ಕೆ ಇತರ ಕಾರಣ ಗಳಿವೆಯೋ ಎಂಬುದನ್ನು ತಿಳಿಯಲು ನಿವೇದ್ಯಳ ಫೋನನ್ನು ಸಮಗ್ರವಾಗಿ ಪರಿಶೀ ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ ಸಂಬಂಧಿಕರ ದೂರಿನ ಹಿನ್ನೆಲೆಯಲ್ಲಿ ನಿವೇದ್ಯಳನ್ನು ಠಾಣೆಗೆ ಕರೆದು ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಪತಿ ಮದ್ಯಪಾನಿ ಯಾಗಿದ್ದು, ಇದರಿಂದ ಕುಟುಂಬದಲ್ಲಿ ಸಮಸ್ಯೆಗಳುಂಟಾಗಿತ್ತೆನ್ನಲಾಗಿದೆ. ಆದರೆ ನಿವೇದ್ಯಳಿಗೆ ಯಾವುದೇ ಮಾನಸಿಕ ಸಮಸ್ಯೆಗಳಿರಲಿಲ್ಲವೆಂದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







