ಯಾದವ ಸಮಾಜದ ಹಿರಿಯ ನಿಧನ

ಬೆಳ್ಳೂರು: ಯಾದವ ಸಮಾಜದ ಹಿರಿಯ ಸದಸ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಆರ್ಲಪದವು ದೇವಸ್ಯ ನಿವಾಸಿ ಮಹಾಲಿಂಗ ಮಣಿಯಾಣಿ (95) ಸ್ವ-ಗೃಹದಲ್ಲಿ ನಿಧನ ಹೊಂದಿದರು.  ಆರ್ಲಪದವಿನಲ್ಲಿ ತರಕಾರಿ ಅಂಗಡಿ ಹಾಗೂ ದೇವಸ್ಯದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಯಾದವ ಸಮುದಾಯದ ಮಾರ್ಗದರ್ಶಕರಾಗಿದ್ದ ಇವರು ಆರ್ಲಪದವಿನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆರಂಭಿಸಲು ಕಾರಣಕರ್ತರಾಗಿ ದ್ದರು. ಆರ್ಲಪದವು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇಗುಲದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

You cannot copy contents of this page