ಮನೆಯ ಸಿಟೌಟ್‌ನಲ್ಲಿ ಗೃಹಿಣಿ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮನೆಯ ಸಿಟೌಟ್‌ನಲ್ಲಿ ಗೃಹಿಣಿಯೋರ್ವೆ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ.

ಕುಡಾಲ್‌ಮೇರ್ಕಳ ಲಂಕಿನಡ್ಕ ನಿವಾಸಿ ಸವಿತ (51) ಮೃತಪಟ್ಟ ಗೃಹಿಣಿ. ಇಂದು ಬೆಳಿಗ್ಗೆ  ಇವರು ಮನೆಯ ಸಿಟೌಟ್‌ನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಲಭಿಸಿದ ಮಾಹಿತಿಯಂತೆ  ಕುಂಬಳೆ ಇನ್ ಸ್ಪೆಕ್ಟರ್ ಅನೂಪ್‌ಕೃಷ್ಣರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸವಿತರ ಕಾಲು,ಕೈಗಳಲ್ಲಿ ಗಾಯಗಳು ಕಂಡುಬಂದಿರುವುದಾಗಿ ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ  ಕೊಂಡೊಯ್ಯಲಾಗಿದೆ.

ಇದೇ ವೇಳೆ ಸವಿತರ ಸಾವಿನ ಬಗ್ಗೆ  ನಾಗರಿಕರು ಸಂಶಯ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯ ಅಗತ್ಯವಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹ ಪತ್ತೆಯಾದ ಮನೆಯೊಳಗೆ ಪೊಲೀಸರು ನಡೆಸಿದ ತಪಾಸಣೆ ವೇಳೆ ಸವಿತಾರ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅದರಲ್ಲಿ ಸವಿತ ಕುಂಟಂಗೇರಡ್ಕ ನಿವಾಸಿ ದಿನೇಶ ಎಂಬವರ ಪತ್ನಿಯೆಂದು ದಾಖಲಿಸಲಾಗಿದೆ. ಸವಿತ ಈ ಹಿಂದೆ ಜೋಡುಕಲ್ಲು ನರಸಣ್ಣ ಕಾಲನಿಯಲ್ಲಿ ವಾಸಿಸುತ್ತಿದ್ದರು. ಅನಂತರ ೧೩ ವರ್ಷಗಳಿಂದ ಕುಡಾಲ್‌ಮೇರ್ಕಳದ ಲಂಕಿನಡ್ಕದಲ್ಲಿ ಬಾಡಿಗೆ ಮನೆಯಲ್ಲಿದ್ದರು.  ಕಳೆದ ಮೂರು ವರ್ಷಗಳಿಂದ ಲೈಫ್ ವಸತಿ ಯೋಜನೆಯಲ್ಲಿ ಲಭಿಸಿದ ಮನೆಯಲ್ಲಿ  ವಾಸಿಸುತ್ತಿದ್ದರು. ಇದೇ ವೇಳೆ ಸವಿತರ ಜತೆಗೆ ಈ ಮನೆಯಲ್ಲಿ ಕರ್ನಾಟಕದ ಶಿವಮೊಗ್ಗ ನಿವಾಸಿಯಾದ ಚೆನ್ನಪ್ಪ (೬೨) ಎಂಬವರು ಹಲವು ವರ್ಷಗಳಿಂದ ವಾಸವಾಗಿದ್ದಾರೆ.

ಇಂದು ಬೆಳಿಗ್ಗೆ ಸವಿತ ಮೃತಪಟ್ಟಿರುವುದಾಗಿ ಚೆನ್ನಪ್ಪ ನೆರೆಮನೆ ನಿವಾಸಿಗಳಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಂತೆ ಸ್ಥಳೀಯರು ಅಲ್ಲಿಗೆ ತಲುಪಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸವಿತ ಕೂಲಿ ಕಾರ್ಮಿಕೆಯಾಗಿದ್ದರು. ಅವರ ಸಾವಿಗೆ ಕಾರಣವೇನೆಂದು ತಿಳಿದುಬಂ ದಿಲ್ಲ.  ಇದೇ ವೇಳೆ ಚೆನ್ನಪ್ಪ ಹಾಗೂ  ಸವಿತ ನಿರಂತರ ಮದ್ಯ ಸೇವಿಸಿ ಜಗಳವಾ ಡುತ್ತಿದ್ದರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಯಲ್ಲಿ  ಸಾವಿಗೆ ಕಾರಣ ತಿಳಿದುಬರಲಿದೆಯೆಂದು ನಿರೀಕ್ಷಿಸಲಾಗಿದೆ.

You cannot copy contents of this page