ಕುಂಬಳೆ: ಪೆರ್ಮುದೆ ಪೆರಿಯಡ್ಕದ ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಕಿಚ್ಚಿಟ್ಟು ನಾಶಗೊಳಿಸಿದ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಪೆರಿಯಡ್ಕದಲ್ಲಿ ಟಿ. ರೋಹಿತಾಕ್ಷ ಎಂಬವರ ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಪೈವಳಿಕೆಯ ಅಬ್ದುಲ್ ರಶೀದ್‌ರ ಮಾಲಕತ್ವದ ಪೋಲೋ ಕಾರನ್ನು ದುಷ್ಕರ್ಮಿಗಳು ಕಿಚ್ಚಿಟ್ಟು ನಾಶಗೊಳಿಸಿದ್ದಾರೆ. ದುರಸ್ತಿ ಕೆಲಸಗಳಿಗಾಗಿ ಕಾರನ್ನು ವರ್ಕ್ ಶಾಪ್‌ನಲ್ಲಿರಿಸಲಾಗಿತ್ತು. ನಿನ್ನೆ ವರ್ಕ್ ಶಾಪ್ ಮಾಲಕ ತಲುಪಿದಾಗ ಕಾರು ಉರಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಸಿಐ ಆರ್.ಪಿ ಅನೂಪ್‌ಕೃಷ್ಣ, ಎಸ್‌ಎಚ್‌ಒ ಎಸ್. ಅನೂಪ್ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಅಲ್ಲ್ಲಿನ ಸಿಸಿ ಟಿವಿ ಪರಿಶೀಲಿಸಿದಾಗ ನಿನ್ನೆ ಮುಂಜಾನೆ ಇಬ್ಬರು ವ್ಯಕ್ತಿಗಳು ತಲುಪಿ ಕಾರಿಗೆ ಕಿಚ್ಚಿಡುವ ದೃಶ್ಯ ಪತ್ತೆಯಾಗಿದೆ. ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾಗಿದೆ.







