ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ 36626 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಚೆಟ್ಟುಂಗುಳಿ ನಿವಾಸಿ ಮುಹಮ್ಮದ್ ಸಫೀರ್ ಸಿ.ಕೆ (27) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ಠಾಣೆ ಎಸ್.ಐ ಮನು ಪಿ.ವಿಯವರ ನೇತೃತ್ವದ ಪೊಲೀಸರು ನಿನ್ನೆ ರಾತ್ರಿ ಕೂಡ್ಲು ಆಜಾದ್ ನಗರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಚೌಕಿಯಿಂದ ಉಳಿಯತ್ತಡ್ಕಕ್ಕೆ ಹೋಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಗೊಳಪಡಿಸಿದಾಗ ಸೀಟಿನ ಅಡಿಭಾಗ ದಲ್ಲಿ 11 ಗೋಣಿ ಚೀಲಗಳಲ್ಲಿ ಬಚ್ಚಿಡ ಲಾಗಿದ್ದ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಕಾರಿನಲ್ಲಿದ್ದ ಆರೋಪಿ ಯನ್ನು ಮಾಲು ಸಹಿತ ಬಂಧಿಸಿ ಪ್ರಕರಣ ದಾಖಲಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಮೂಲತಃ ನೋರ್ತ್ ತೃಕರಿಪುರ ಮೀಲಿಯಾಟ್ ಫಾತಿಮಾ ಮಂಜಿಲ್ನ ನಿವಾಸಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದಾರೆ.







