ಕುಂಬಳೆ: ಕೇರಳ ನದಿದಡ ಸಂರಕ್ಷಣಾ ಕಾನೂನಿಗೆ ವಿರುದ್ಧವಾಗಿ ಪಾಚಾಣಿ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿರಿಯಾ ಗ್ರಾಮದ ಶಿರಿಯಾ ಕೆ.ವಿ. ನಿಲಯದ ರಜಿನ್ ಕುಮಾರ್ (29), ಇಚ್ಲಂಗೋಡು ಗ್ರಾಮದ ವೀರನಗರ ಅಡ್ಕ ನಿವಾಸಿ ಮುಖೇಶ್ (27) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಅಲ್ಲದೆ ಹೊಯ್ಗೆ ಸಾಗಾಟಕ್ಕೆ ಬಳಸಿದ ಲಾರಿಯ ಆರ್.ಸಿ ಮಾಲಕನ ವಿರುದ್ಧವೂ ಕೇಸು ದಾಖಲಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ೧೧.೩೦ರ ವೇಳೆ ಚೇವಾರು ಎಂಬಲ್ಲಿ ಕುಂಬಳ ಠಾಣೆಯ ಎಸ್.ಐ ಸಂತೋಷ್ ವಿ.ವಿ,
ಎಎಸ್‌ಐ ಅತುಲ್‌ರಾಂ, ಎಎಸ್‌ಐ ಅಜಯ್ ಎಂಬಿವರು ವಾಹನ ಪಾಸಣೆ ನಡೆಸುತ್ತಿದ್ದ ವೇಳೆ ಮಂಡೆಕಾಪು ಭಾಗದಿಂದ ಪೆರ್ಮು ದೆಯತ್ತ ಸಾಗುತ್ತಿದ್ದ ಹೊಯ್ಗೆ ಹೇರಿದ ಲಾರಿ ಆಗಮಿಸಿದೆ. ಅದನ್ನು ತಪಾಸಣೆ ನಡೆಸಿದಾಗ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಮಾರಾಟಕ್ಕಾಗಿ ಸಾಗಿಸಲಾಗು ತ್ತಿದೆ ಯೆಂದು ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.






