ಕುಂಬಳೆ: ರ‍್ಯಾಗಿಂಗ್ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಎಂಬ ಉದ್ದೇಶದೊಂದಿಗೆ ಮೊಗ್ರಾಲ್ ದೇಶಿಯವೇದಿ ನಡೆಸುವ ಜಿಲ್ಲಾಮಟ್ಟದ ರ‍್ಯಾಗಿಂಗ್ ವಿರುದ್ಧ ಕಾರ್ಯಾಗಾರದ ದ್ವಿತೀಯ ಹಂತದ ತಿಳುವಳಿಕಾ ತರಬೇತಿ ಕುಂಬಳ ಜಿಎಚ್‌ಎಸ್‌ಎಸ್‌ನಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಮೊದೀನ್ ಅಸೀಸ್ ಅಧ್ಯಕ್ಷತೆ ವಹಿಸಿದರು. ರ‍್ಯಾಗಿಂಗ್‌ನ ಗಂಭೀರ ಆಘಾತಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ಕುಂಬಳೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅನೂಪ್ ಸ್ಟೀಫನ್ ವಿದ್ಯಾರ್ಥಿಗಳಿಗೆ ವಿವರಿಸಿದರು. ರ‍್ಯಾಗಿಂಗ್ ಗಮನಕ್ಕೆ ಬಂದರೆ ಕೈಗೊಳ್ಳಬೇಕಾದ ಕ್ರಮಗಳು, ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾದುದುರ ಪ್ರಾಮುಖ್ಯತೆ, ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಗೌರವ ಸೌಹಾರ್ದತೆ ಬೆಳೆಸಬೇಕಾದ ಅಗತ್ಯ ಮೊದಲಾದ ವಿಷಯಗಳಲ್ಲಿ ಅವರು ವಿದ್ಯಾರ್ಥಿಗಳ ಸಂಶಯ ಗಳಿಗೆ ಉತ್ತರ ನೀಡಿದರು. ದೇಶೀಯವೇದಿ ಅಧ್ಯಕ್ಷ ಎ.ಎಂ. ಸಿದ್ದೀಕ್ ರಹ್ಮಾನ್, ಪ್ರಾಂಶುಪಾಲೆ ಸಿಂಧು ಎನ್., ಮುಖ್ಯೋಪಾಧ್ಯಾ ಯಿನಿ ಶೈಲಜ ವಿ.ಆರ್. ಸಹಿತ ಹಲವರು ಮಾತನಾಡಿದರು.






