ಉಪ್ಪಳ: ಸೋಂಕಾಲು ನಿವಾಸಿ ನಿವೃತ್ತ ಅಧ್ಯಾಪಿಕೆ ಸುಶೀಲ ಟೀಚರ್ (96) ಅಲ್ಪ ಕಾಲದ ಅಸೌಖ್ಯದಿಂದ ಪಾಪನ್‌ಶ್ಯೇರಿಯಲ್ಲಿರುವ ಮಗಳ ಮನೆಯಲ್ಲಿ ನಿನ್ನೆ ಸಂಜೆ ನಿಧನ ಹೊಂದಿದರು. ಇವರು ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯಲ್ಲಿ ೩೫ ವರ್ಷಗಳ ತನಕ ವೃತ್ತಿ ಪರಿಚಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದರು. ಮೃತರು ಪತಿ ದಿ| ಪಿ.ವಿ ಕುಂಞAಬು, ಮಕ್ಕಳಾದ ಶ್ರೀನಿವಾಸ (ದಾಸ), ಶೈಲಜಾ, ಸುಜಾತ, ಶ್ರೀಕಾಂತ್, ಅಳಿಯಂದಿರಾದ ವಲ್ಸರಾಜ್ ಪಾಪನ್‌ಶ್ಯೇರಿ, ರವೀಂದ್ರ, ಸೊಸೆಯಂದಿರಾದ ವಸಂತ, ಭಾಗೀರಥಿ, ಸಹೋದರ ಜಯಾನಂದ ಉಪ್ಪಳ, ಸಹೋದರಿ ಕಾರ್ತ್ಯಾಯಿನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕವೃಂದ, ಹಳೇ ವಿದ್ಯಾರ್ಥಿ ಸಂಘ ಸಂತಾಪ ಸೂಚಿಸಿದೆ.





