ಪೆರ್ಲ: ಶೇಣಿ ಗ್ರಾಮದ ಓಣಿಬಾಗಿಲು ಹೊಸಗದ್ದೆ ಮೂಲೆ ನಿವಾಸಿ ದಿ| ಅಮ್ಮು ಪೂಜಾರಿಯವರ ಪತ್ನಿ ಕುಸುಮಾವತಿ (8೦) ಇಂದು ಮುಂಜಾನೆ ನಿಧನ ಹೊಂದಿದರು. ಮೃತರು ಮಕ್ಕಳಾದ ಸುರೇಶ್, ದೇವದಾಸ್, ದಿಲೀಪ್ (ಪೆರ್ಲ ಬಿಲ್ಲವ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ), ರಾಜೇಶ್, ಶ್ರೀಧರ (ಪೆರ್ಲ ಬಿಲ್ಲವ ಸಂಘದ ಸಕ್ರಿಯ ಸದಸ್ಯ), ಆಶಾಲತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕುಸುಮಾವತಿಯವರ ನಿಧನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಪೆರ್ಲ ಸಂತಾಪ ಸೂಚಿಸಿದೆ.





