ಕಾರಿಗೆ ಕಿಚ್ಚಿರಿಸಿದ ಬೆನ್ನಲ್ಲೇ ಪೆರ್ಮುದೆ ಗ್ಯಾರೇಜ್‌ನಲ್ಲಿರಿಸಿದ್ದ  ನಾಲ್ಕು ಕಾರುಗಳ ಗಾಜು ಹೊಡೆದು ಹಾನಿ

ಪೆರ್ಮುದೆ: ಪೆರಿಯಾಟ್ಕದಲ್ಲಿ ಗ್ಯಾರೇಜ್‌ನಲ್ಲಿರಿಸಿದ್ದ ವಾಹನಗಳಿಗೆ ಮತ್ತೆ ಆಕ್ರಮಣ ನಡೆಸಲಾಗಿದೆ. ಗ್ಯಾರೇಜ್‌ನ ಮುಂಭಾಗದಲ್ಲಿರಿಸಲಾಗಿದ್ದ ನಾಲ್ಕು ಕಾರುಗಳ ಗಾಜುಗಳನ್ನು ಹಾನಿಗೊಳಿಸಲಾಗಿದೆ. ಟಿ. ರೋಹಿತಾಕ್ಷ ಎಂಬವರ ಮಾಲಕತ್ವದಲ್ಲಿರುವ ಆದಿಯಾ ಆಟೋ ಮೊಬೈಲ್ ವರ್ಕ್‌ಶಾಪ್‌ನಲ್ಲಿ ಘಟನೆ ನಡೆದಿದೆ. ಇದೇ ಗ್ಯಾರೇಜ್‌ನಲ್ಲಿ ಇದಕ್ಕೂ ಮೊದಲು ನಿಲ್ಲಿಸಿದ್ದ ಕಾರೊಂದನ್ನು ಕಿಚ್ಚಿರಿಸಿ ನಾಶಗೊಳಿಸಲಾಗಿತ್ತು. ಇದೇ ಅಕ್ರಮಿ ಆಗಿರಬೇಕು ಕಾರುಗಳ ಗಾಜುಗಳನ್ನು ಒಡೆದು ಹಾನಿಗೊಳಿಸಿರುವುದೆಂದು ಮಾಲಕ ಶಂಕಿಸಿದ್ದಾರೆ. ಶನಿವಾರ ರಾತ್ರಿ ಕಾರುಗಳ ಗಾಜು ಹಾನಿಗೊಳಿಸಲಾಗಿದ್ದರೂ, ಇದುವರೆಗೂ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

You cannot copy contents of this page