ಸೇವಾ ಸಂಕಲ್ಪ ಅಭಿಯಾನ: ಬಿಜೆಪಿಯಿಂದ  ಹಿರಿಯ ನಾಗರಿಕರಿಗೆ ಗೌರವಾರ್ಪಣೆ

ಮಂಗಲ್ಪಾಡಿ: ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು ಸಮಾಜದ ಹಿತಕ್ಕಾಗಿ ಅನೇಕ ಕಷ್ಟಗಳನ್ನು ಅನುಭವಿಸಿದವರಾಗಿದ್ದಾರೆ. ಅವರನ್ನು ಸಮಾಜದಲ್ಲಿ ಗೌರವಿಸುವ ಮನೋಭಾವ ಇರುವುದು ಬಿಜೆಪಿಗೆ ಮಾತ್ರ ಎಂದÀÄ ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯ ವರ ಜನಸೇವೆಗೆ 25 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬಿಜೆಪಿ ಪ್ರತಾಪನಗರ ಬೂತ್ ಸಮಿತಿ ನೇತೃತ್ವದಲ್ಲಿ ಹಿರಿಯ ನಾಗರಿಕರಿಗೆ ವಿ. ರವೀಂದ್ರನ್ ಶಾಲು ಹೊದಿಸಿ ಗೌರವಿಸಿದರು.
ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ ಹಿರಿಯ ನಾಗರಿಕರಿಗೆ ಉಡುಗೊರೆ ನೀಡಿ ಗೌರವಿಸಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್, ಜಿಲ್ಲಾ ಸಮಿತಿ ಸದಸ್ಯ ಬಾಬು ಕುಬಣೂರು, ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಸಾಕ್ಷಿ ಶೆಟ್ಟಿ, ಪಂಚಾಯತ್ ಸದಸ್ಯ ವಸಂತಕುಮಾರ್ ಮಯ್ಯ, ಮಹಿಳಾಮೋರ್ಚಾ ಮಂಡಲ ಅಧ್ಯಕ್ಷೆ ಸುಧಾ ಗಣೇಶ್, ಪಂಚಾಯತ್ ಮಟ್ಟದ ನಾಯಕರಾದ ಮೋಹನ ಪೂಜಾರಿ, ಉದಯಶಂಕರ ಶೆಟ್ಟಿ, ಪ್ರಕಾಶ್ ಆಚಾರ್ಯ, ಲೋಕನಾಥ ಶೆಟ್ಟಿ, ನಾರಾಯಣ ಆಚಾರ್ಯ, ಅಚ್ಯುತ ಪ್ರತಾಪನಗರ ಮುಂತಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರತಾಪನಗರದ ಹಿರಿಯರಾದ ಅಂಗಾರ, ರಾಧಾಕೃಷ್ಣ ಆಚಾರ್ಯ, ನಾರಾಯಣ ಶೆಟ್ಟಿ ಪರಪುö್ಪ, ಚೆರಿಯಮ್ಮ ರವರು ಸನ್ಮಾನಿತÀರಾದವರಾಗಿದ್ದಾರೆ.

RELATED NEWS

You cannot copy contents of this page