ಬದಿಯಡ್ಕ: ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ವಂಚನೆ ನಡೆದಿದೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಸಿದ ಚಳವಳಿಯಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ಗಾಂಧಿ ಹಾಗೂ ಇತರ ನಾಯಕರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ಸಭೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧಕ್ಷತೆ ವಹಿಸಿದರು. ಕರ್ಷಕ ಕಾಂಗ್ರೆಸ್ ಕಾರಡ್ಕ ಬ್ಲೋಕ್ ಸಮಿತಿ ಅಧ್ಯಕ್ಷ ಪೆರ್ಮುಖ ತಿರುಪತಿ ಕುಮಾರ್ ಭಟ್ ಉದ್ಘಾಟಿಸಿದರು. ನೇತಾರರಾದ ಗಂಗಾಧರ ಗೋಳಿಯಡ್ಕ, ಜಗನ್ನಾಥ ರೈ, ಅಬೂಬಕ್ಕರ್ ಬಣ್ಪುತ್ತಡ್ಕ, ಅಶತಿ, ಅಶೋಕನ್, ಲೀಲಾವತಿ ಕುಂಟಾಲುಮೂಲೆ, ಎಂ. ಅಬ್ಬಾಸ್, ರಾಮ ಪಟ್ಟಾಜೆ ಶಾಫಿ ಗೋಳಿಯಡ್ಕ, ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ದರ್ಭೆತ್ತಡ್ಕ, ಲೋಹಿತಾಕ್ಷನ್, ಕೃಷ್ಣ ಕುಮಾರ್, ರವೀಂದ್ರ ಕುಂಟಾಲುಮೂಲೆ, ರಾಮಕೃಷ್ಣನ್, ವಿನ್ಸೆಂಟ್ ವಿದ್ಯಾಗಿರಿ,ವಾಮನ ನಾಯ್ಕ್, ಸತೀಶ ಪೆರುಮುಂಡ,ಶಾಫಿ ಗೋಳಿಯಡಿ, ಅಪ್ಪು ನಾಯ್ಕ್, ಸವಾದ್ ಬಣ್ಪುತ್ತಡ್ಕ, ಮ್ಯಾಥ್ಯೂ, ಬೆಂಜಮಿನ್, ನಿಜೀಶ್, ಗಿರೀಶ್, ಬಾಲಕೃಷ್ಣ ಕಾರಮೂಲೆ ಮೊದಲಾದವರು ಭಾಗವಹಿಸಿದರು.






