ಕೃಷಿಕ ಕುಸಿದು ಬಿದ್ದು ಮೃತ್ಯು

ಕುಂಬ್ಡಾಜೆ: ಕೃಷಿಕರೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಏತಡ್ಕ ನಡುಮನೆ ನಿವಾಸಿ  ರವೀಂದ್ರನಾಥ್ ಭಟ್ (67) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮಾರ್ಪನಡ್ಕದ ಗ್ರಾಮೀಣ ಬ್ಯಾಂಕ್ ಸಮೀಪ ಘಟನೆ ನಡೆದಿದೆ. ಬ್ಯಾಂಕ್‌ಗೆ ಬಂದಿದ್ದ ಇವರು ಮರಳಿ ಮನೆಗೆ ಹೋಗಲು ಕಾರಿಗೆ ಹತ್ತುತ್ತಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಸಮೀಪದ ಕುಟುಂಬ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಲಲಿತ, ಮಕ್ಕ ಳಾದ ಸುಷ್ಮ, ನಿಷ್ಮ, ಅಳಿಯಂ ದಿರಾದ ವಿವೇಕ್, ವಿಕಾಸ್, ಸಹೋದರ-ಸಹೋದರಿಯರಾದ ಸೂರ್ಯಪ್ರಕಾಶ್, ಜಯರಾಜ್,  ರಾಣಿಕಲಾ, ರಾಜಶ್ರೀ, ಸರೋಜಿನಿ, ಜಯಂತಿ, ಪುಷ್ಪ, ಜಲಜ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page