ಕೇಂದ್ರೀಯ ವಿ.ವಿ.ಯ ವಿಚಾರಗೋಷ್ಠಿ ಬುಡಮೇಲುಗೊಳಿಸಲು ಯತ್ನ:  25 ಮಂದಿ ವಿರುದ್ಧ ಕೇಸು

ಕಾಸರಗೋಡು: ಕೇಂದ್ರ ವಿವಿಯಲ್ಲಿ ವಂದೇ ಮಾತರಂ ರಾಷ್ಟ್ರೀಯ ವಿಚಾರಗೋಷ್ಠಿ ಮಧ್ಯೆ ಪ್ರತಿಭಟಿಸಿದ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಕಂಡರೆ ಗುರುತು ಹಿಡಿಯಬಹುದಾದ 25 ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಸ್ವತಃ ತಂಡ ಸೇರಿ ವಿಚಾರಗೋಷ್ಠಿಯನ್ನು ಅಲ್ಲೋಲಕಲ್ಲೋಲಗೊಳಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ರಾಜ್ಯಪಾಲರ ಕಾರ್ಯಕ್ರಮದ ಬಳಿಕ ಕಾರ್ಯಕ್ರಮದ ಪ್ರಧಾನ ಸಂಘಟಕ ಹಾಗೂ ಪ್ರೋಕ್ಟರ್ ಆಗಿರುವ ಕೆ. ಶ್ರೀಕುಮಾರ್‌ರ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದಲ್ಲಿರುವ ಪೊಲೀಸರು ವಿ.ವಿಗೆ ತಲುಪಿದ್ದರು. ಶ್ರೀಕುಮಾರ್ ಮಾತನಾಡುತ್ತಿದ್ದ ಮಧ್ಯೆ ಗೋಬ್ಯಾಕ್ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ತಲುಪಿದ್ದಾರೆ. ಚಪ್ಪಲಿ ಹಾಗೂ ಶೂಸ್ ಎತ್ತಿ ಭಾಷಣ ನಿಲ್ಲಿಸಬೇಕೆಂದು ವಿವಿಧ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳು ಬೊಬ್ಬೆ ಹಾಕಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿದರು. ಅವರವರ ಸೀಟಿನಲ್ಲಿ ಕುಳಿತುಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದರು. ಆದರೆ ಪೊಲೀಸರ ಎಚ್ಚರಿಕೆ ಉಲ್ಲಂಘಿಸಿ ಆಕ್ರಮಣ ನಡೆಸಲು ಮುಂದಾಗಿದ್ದು, ಮತ್ತಷ್ಟು ಹೆಚ್ಚು ಘೋಷಣೆ ಮೊಳಗಿಸಿದ್ದಾರೆ. ಈ ಮಧ್ಯೆ ಎಬಿವಿಪಿ ಹಾಗೂ ಇತರ ಸಂಘಟನೆಗಳ ಮಧ್ಯೆ ವಾಗ್ವಾದ ಉಂಟಾಯಿತು. ಈ ವೇಳೆ ಬಲ ಪ್ರಯೋಗಿಸಿ ವಿದ್ಯಾರ್ಥಿಗಳನ್ನು ಸ್ಥಳದಿಂದ ತೆರವುಗೊಳಿಸಿದರು.

RELATED NEWS

You cannot copy contents of this page