ತೃಶೂರು: 11ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಸೋಶ್ಯಲ್ ಮೀ ಡಿಯಾ ಇನ್ಫ್ಲುವೆನ್ಸರ್ ನಿಷಾ ರಾಫೇಲ್ಳ ವಿರುದ್ಧ ತೃಶೂರು ವೆಸ್ಟ್ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕನನ್ನು ತೃಶೂರು ಜನರಲ್ ಆಸ್ಪತ್ರೆಗೆ ತಲುಪಿಸಿ ಮೆಡಿಕೋ-ಲೀಗಲ್ ಪರಿಶೀಲನೆಗೊ ಪಡಿ ಸಲಾಯಿತು. ಬಾಲಕನಿಗೆ ಲೈಂಗಿಕ ದೌರ್ಜನ್ಯನಡೆದಿರುವುದಾಗಿ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಸ್ಪಷ್ಟಗೊಂಡಿದೆ. ಇದೇ ವೇಳೆ ನಿಷಾ ರಾಪೇಲ್ ವಿರುದ್ಧ ಬಾಲಕ ಗಂಭೀರ ಆರೋಪಗಳನ್ನು ಹೊರಿಸಿದ್ದಾನೆನ್ನಲಾಗಿದೆ. ನಿಷಾ ರಾಪೇಲ್ ಅಧ್ಯಾಪಿಕೆಯೂ ಆಗಿದ್ದಾಳೆ.






