ಮಂಜೇಶ್ವರ ಮಂಡಲ ಕಾಂಗ್ರೆಸ್‌ನಿಂದ ಹೊಸಂಗಡಿಯಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ

ಹೊಸಂಗಡಿ: ರಾಹುಲ್ ಗಾಂಧಿ ಮತ್ತು ಕೇಂದ್ರ ನಾಯಕರನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಸಂಗಮ ಹಾಗೂ ಸಾರ್ವ ಜನಿಕ ಸಭೆ ಆಯೋಜಿಸಲಾಯಿತು. ಮಂಡಲ ಅಧ್ಯಕ್ಷ ಹನೀಫ್ ಪಡಿನ್ಹಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಉಪಾಧ್ಯಕ್ಷ ಮುಹಮ್ಮದ್ ಸೀಗಂದಡಿ ಉದ್ಘಾಟಿಸಿದರು.
ವಿವಾದಕ್ಕೆಡೆಯÁದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ವೆಂದೂ, ತಕ್ಷಣವೇ ರಾಜೀನಾಮೆ ನೀಡಬೇಕೆಂದು ಮುಹಮ್ಮದ್ ಸೀಗಂದಡಿ ಆಗ್ರಹಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಓಂ ಕೃಷ್ಣ, ಅಹ್ಮದ್ ಮನ್ಸೂರ್, ಇರ್ಷಾದ್ ಅಹ್ಮದ್, ಯೋಗೇಶ್ ಮಂಜೇಶ್ವರ, ಜಕರಿಯಾ ಶಾಲಿಮಾರ್, ರಂಜಿತ್, ಪ್ರಭಾಕರನ್, ಐ.ಆರ್.ಡಿ.ಪಿ. ಇಬ್ರಾಹಿಂ, ಮಾಜಿ ಮಂಡಲ ಅಧ್ಯಕ್ಷ ಉಮರ್ ಶಾಫಿ ಮಾಸ್ಟರ್ ಮುಂತಾದವರು ಮಾತನಾಡಿದರು. ನಾಯಕರಾದ ಯು. ಅಬ್ದುರಹ್ಮಾನ್, ಅಬ್ದುರಹ್ಮಾನ್ ಹಾಜಿ, ಶಬೀರ್ ಅಹ್ಮದ್, ಮಹಾಲಿಂಗ, ಸುನಿಲ್ ಕುಮಾರ್, ಮೊಯಿದೀನ್, ತಮೀಮ್ ಮಂಜೇಶ್ವರ, ಅಬ್ದುಲ್ಲಾ ದಿಲ್ದಾರ್, ಇಲ್ಯಾಸ್, ಎಂ.ಎಚ್. ಹನೀಫ್ ಮತ್ತು ವಾರ್ಡ್ ಅಧ್ಯಕ್ಷರಾದ ಸಿದ್ದಿಕ್ ಮಂತ್ರಿ, ಸೂಫಿ ಜಮಾಲ್, ಹರೀಶ, ಇಸ್ಮಾಯಿಲ್ ಎಂ.ಕೆ., ಎಂ.ಕೆ. ಅಬ್ಬಾಸ್ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ನಿಸಾರ್, ಜದೀರ್ ಮುಂತಾದವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್.ಯು. ನಾಯಕ ಅಭಿನಿ ಕೃಷ್ಣ ಸ್ವಾಗತಿಸಿ ಮಂಡಲ ಕಾರ್ಯದರ್ಶಿ ಸಲಾಮ್ ವಂದಿಸಿದರು.

You cannot copy contents of this page