ಸರಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು- ಸುನಿಲ್ ಪಿ.ಆರ್.

ಬದಿಯಡ್ಕ: ಕೇಂದ್ರ ಸರ್ಕಾರವು ರೈತರು, ಮಹಿಳೆಯರು, ಯುವಕರು ಹಾಗೂ ಬಡ ವರ್ಗದವರ ಕಲ್ಯಾಣಕ್ಕಾಗಿ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್ ನಿದಿs, ಆಯುಷ್ಮಾನ್ ಭಾರತ್, ಮುದ್ರಾ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜ್ಯಾರಿಗೆ ತಂದಿದೆ. ಆದರೆ ಮಾಹಿತಿ ಕೊರತೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ. ಈ ಕೊರತೆಯನ್ನು ನೀಗಿಸಿ, ಪ್ರತಿ ಮನೆಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಶಿಬಿರವು ಅತ್ಯಂತ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಹೇಳಿದರು.
ಬಿಜೆಪಿ ಬದಿಯಡ್ಕ ಪಂ. ಸಮಿತಿ ನೇತೃತ್ವದಲ್ಲಿ `ಸೇವಾ ಸಂಕಲ್ಪ್ ಅಭಿಯಾನ’ದ ಅಂಗವಾಗಿ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಂಡ ಹೆಲ್ಪ್ ಡೆಸ್ಕ್ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಬದಿಯಡ್ಕ ಪಂ. ಪೂರ್ವ ವಲಯ ಅಧ್ಯಕ್ಷ ಉದನೇಶ್ವರ ಬಿ.ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪಂ. ಅಧ್ಯಕ್ಷ ಡಿ.ಶಂಕರ ಶುಭಾಶಂಸನೆಗೈದು, ಪ್ರಧಾನಿಯವರ ವಿಕಸಿತ ಭಾರತದ ಕನಸನ್ನು ನನಸು ಮಾಡಲು ನಮ್ಮ ಗ್ರಾಮ ಪಂ. ವ್ಯಾಪ್ತಿಯಲ್ಲೂ ಸಕಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗು ವುದು. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಜನಸಾಮಾನ್ಯರ ಮೂಲಭೂತ ಅಗತ್ಯಗಳನ್ನು ಪೂರೈಸಲು ಬೇಕಾದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಪಂಚಾಯತ್ ಮೂಲಕ ಪ್ರಾಮಾಣಿಕವಾಗಿ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲೋಕ್ ಪಂ.ಸದಸ್ಯ ಮಹೇಶ್ ವಳಕ್ಕುಂಜ, ಸ್ಥಾಯಿಸಮಿತಿ ಅಧ್ಯಕ್ಷರಾದ ರಜನಿ ಸಂದೀಪ್, ಅವಿನಾಶ್ ರೈ ಮಾತನಾಡಿ ದರು. ಬಿಜೆಪಿ ಬದಿಯಡ್ಕ ಪೂರ್ವ ವಲಯ ಉಪಾಧ್ಯಕ್ಷ ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ವಳಮಲೆ ವಂದಿಸಿದರು. ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ. ನಿರೂಪಿಸಿದರು. ಪಂ. ಸದಸ್ಯರುಗಳಾದ ಉಷಾ ಪಳ್ಳತ್ತಡ್ಕ, ಮಧುಸೂದನ ಕಂಗಿಲ, ಶ್ಯಾಮಪ್ರಸಾದ ಸರಳಿ, ಪಕ್ಷ ಪ್ರಮುಖರಾದ ನವಿನಾಕ್ಷನ್, ಜಯರಾಮ ಚೆಟ್ಟಿಯಾರ್ ಬದಿಯಡ್ಕ, ನಾರಾಯಣ ಪೆರಡಾಲ, ನಾರಾಯಣ ಭಟ್ ಮೈರ್ಕಳ, ಡಿ.ಕೆ.ನಾರಾಯಣನ್ ನಾಯರ್, ಕೃಷ್ಣ ಮಣಿಯಾಣಿ ಮೊಳೆಯಾರು, ಜಯಂತಿ ಚೆಟ್ಟಿಯಾರ್, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಹೆಲ್ಪ್ ಡೆಸ್ಕ್ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರಕಾರದ ವಿವಿಧ ಯೋಜ ನೆಗಳ ನೊಂದಾವಣೆ, ಕಾಸರಗೋಡಿನ ಪ್ರಸಾದ್ ನೇತ್ರಾಲಯದ ವತಿಯಿಂದ ನೇತ್ರತಪಾಸಣೆ ಶಿಬಿರ ನಡೆಯಿತು. ೨೦೦ರಷ್ಟು ಮಂದಿ ಜನರು ಪಾಲ್ಗೊಂಡಿದ್ದರು.

You cannot copy contents of this page