ಯಹೂದಿ ಆರಾಧನಾಲಯದ ಮುಂದೆ ಕಿಚ್ಚಿರಿಸಿ ದಾಳಿಗೆ ಯತ್ನ: ವಿದೇಶಿ ಭಯೋತ್ಪಾದಕ ಸಂಘಟನೆಗೆ ಸೇರಿದ ಓರ್ವ ಕೊಚ್ಚಿಯಲ್ಲಿ ಸೆರೆ

ಎರ್ನಾಕುಳಂ: ಎರ್ನಾಕುಳಂನಲ್ಲಿ ರುವ ಯಹೂದಿಯರ ಆರಾಧನಾಲ ಯದ ಮುಂದೆ ಕಿಚ್ಚಿರಿಸಿ ದಾಳಿ ನಡೆಸಲೆತ್ನಿಸಿದ ಉಗ್ರನನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿ ಪುತ್ತನ್‌ಕುರುಶಿ ವಿದ್ಯಂಪಾಡಿ ಕುನ್ನು ಕಾವಿಲಂಕುಳಿ ಎಬಿನ್ ಬಿ. ಪೋಳಿ(೩೨) ಬಂಧಿತ ಆರೋಪಿ.  ಬಂಧಿತನು ಮೊನ್ನೆ  ಮುಂಜಾನೆ ೨.೩೦ಕ್ಕೆ ಎರ್ನಾಕುಳಂ  ಮಾರ್ಕೆಟ್ ಬಳಿಯ ಯಹೂದಿಯರ ಸೀನಾಗೋಟ್ ಎಂಬ ಆರಾಧನಾಲಯ  ಪರಿಸರದ ಬ್ಯಾನರ್ ಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳಿಗೆ ಕಿಚ್ಚಿರಿಸಿದ್ದನು. ಬಳಿಕ  ಆರಾಧನಾಲ ಯದ ಮೇಲೂ ದಾಳಿಗೆ  ಯತ್ನಿಸಿದ್ದನು. ಕಾರಿನಲ್ಲಿ  ಬಂದಿದ್ದ ಆರೋಪಿ  ಆ ಪ್ರದೇಶವಿಡಿ ಪೆಟ್ರೋಲ್ ಸುರಿದ ನಂತರ  ಬೆಂಕಿ ಹಚ್ಚಿದ್ದನು. ಆ ದೃಶ್ಯವನ್ನು ಆತ   ವೀಡಿಯೋ ಚಿತ್ರೀಕರಿಸಿ ಕಾರಿನಲ್ಲಿ  ಪರಾರಿಯಾಗಿದ್ದನು. ಘಟನೆ   ಸ್ಥಳಕ್ಕೆ  ಪೊಲೀಸರು ಆಗಮಿಸಿ  ಸಿಸಿ ಟಿವಿ ದೃಶ್ಯ ಗಳನ್ನು ಪರಿಶೀಲಿಸಿದಾಗ   ಕಾರಿನ ನಂಬ್ರ ಲಭಿಸಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಗುರುತುಹಚ್ಚಿದ ಪೊಲೀಸರು  ಆತನ ಮನೆಗೆ ದಾಳಿ ನಡೆಸಿ ಆತನನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಆತನ ಮೊಬೈಲ್ ಪರಿಶೀಲಿಸಿದಾಗ  ವಿದೇಶಿ ಭಯೋತ್ಪಾದಕ ಸಂಘಟನೆ ಯೊಂದಿಗೆ ನಿಕಟ ನಂಟುಹೊಂದಿರುವು ದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆ ಸಂಘಟನೆಗೆ ಸೇರಿದ ಬೋಸ್ ಎಂಬ ಹೆಸರಿನ ವ್ಯಕ್ತಿ  ನೀಡಿದ ನಿರ್ದೇಶದಂತೆ ಆರೋಪಿ ಈ ದುಷ್ಕೃತ್ಯವೆಸಗಿದ್ದಾನೆಂದು ತನಿಖೆಯಲ್ಲಿ   ಸ್ಪಷ್ಟಗೊಂಡಿದೆ. ಆದರೆ ಬೋಸ್ ಎಂದು ಕರೆಯುವ ವ್ಯಕ್ತಿ ಯಾರೆಂದು  ಸ್ಪಷ್ಟಗೊಂಡಿಲ್ಲ. ಅದನ್ನು ಬೇಧಿಸುವ  ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ. ದೆಹಲಿ, ಉತ್ತರಪ್ರದೇಶ, ಮುಂಬೈ, ಅಮೃತ್‌ಸರ್ ಎಂಬಿಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಬೇಕೆಂಬ ಸಂದೇಶವನ್ನು ಬೋಸ್ ಕಳುಹಿಸಿಕೊಟ್ಟಿ ದ್ದಾನೆಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಹೀಗೆ ಭಯೋತ್ಪಾದಕ ಕೃತ್ಯಗಳನ್ನೆಸಗಿ ಅದರ ವೀಡಿಯೋ ಚಿತ್ರಗಳನ್ನು ಕಳು ಹಿಸಿಕೊಡುವ ಉಗ್ರರಿಗೆ ಭಯೋತ್ಪಾದಕ ಸಂಘಟನೆಗಳು ಕ್ರಿಫ್ಟೋ ಕರೆನ್ಸಿ ಮೂಲಕ ಹಣ ಕಳುಹಿಸಿಕೊಡುತ್ತಾರೆಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಎಬಿನ್‌ನನ್ನು ಪೊಲೀಸರು   ವಿಚಾರಣೆ ಗೊಳಪಡಿಸಿದಾಗ ಆತ ಈ ಹಿಂದೆ ಮೂವಾಟ್ಟುಪುಳದಲ್ಲೂ ಯೂಸ್ಡ್ ಕಾರ್ ಶೋರೂಂಗೆ   ಕಿಚ್ಚಿರಿಸಿದ್ದಾನೆಂ ಬುವುದು ಸ್ಪಷ್ಟಗೊಂಡಿದೆ.

RELATED NEWS

You cannot copy contents of this page