ಒಂದು ದೇಹ ಎರಡು ತಲೆಯ ಮಗು ಜನನ

ಭುವನೇಶ್ವರ:  ಒಡಿಶಾದ ಕಂಡಮಾಲ್ ಜಿಲ್ಲೆಯಲ್ಲಿ ಒಂದು ದೇಹ ಹಾಗೂ ಎರಡು ತಲೆಯುಳ್ಳ ಮಗು ಜನಿಸಿದೆ.  ಕಳೆದ ಶನಿವಾರ ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಲಾಗಿದೆ.  ಮಗುವನ್ನು ಬೆರ್ಹಾಂಪುರದ ಎಂ.ಕೆ.ಸಿ.ಜಿ ಮೆಡಿಕಲ್ ಕಾಲೇಜು ಆಂಡ್ ಹಾಸ್ಪಿಟಲ್‌ನ ಸ್ಪೆಷಲ್ ನ್ಯೂಬೋನ್ ಕೇರ್ ಯೂನಿಟ್‌ನಲ್ಲಿ ದಾಖಲಿಸ ಲಾಗಿದೆ.  ಎರಡು ಕೈಗಳು, ಎರಡು ಕಾಲುಗಳಿರುವ  ಗಂಡು ಮಗು ಇದಾಗಿದೆ.  ಮಗುವಿನ ಆಂತರಿಕ ಅವಯವಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ತಜ್ಞರು ಬಹಿರಂಗಪಡಿಸಿಲ್ಲ. ಇದೊಂದು ಅಪೂರ್ವ ಸಂಗತಿಯಾಗಿದೆ  ವೈದ್ಯರು ತಿಳಿಸಿದ್ದಾರೆ. ಮಗುವಿನ ತಾಯಿ ಕಾಂಡಮಾನ್ ಜಿಲ್ಲೆಯ ಟುಮೂಡಿ ಬಂದ್ ನಿವಾಸಿಯಾಗಿದ್ದಾರೆ.  ತಂದೆ  ಕೂಲಿ ಕಾರ್ಮಿಕನಾಗಿದ್ದು, ಈ ದಂಪತಿಯ ಚೊಚ್ಚಲ ಮಗು ಇದಾಗಿದೆ.

RELATED NEWS

You cannot copy contents of this page