ಸಿಪಿಎಂ ಕಾರ್ಯಕರ್ತ ನಿಧನ

ಮೀಯಪದವು: ಕೊಳಚಪುö್ಪ ನಿವಾಸಿ, ಸಿಪಿಎಂ ಹಿರಿಯ ಕಾರ್ಯಕರ್ತ ಚೆನ್ನಪ್ಪ ಪೂಜಾರಿ (75) ಅಸೌಖ್ಯದಿಂದ ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಸೀತಾ, ಮಕ್ಕಳಾದ ಶಾಂಭ, ಶೋಭಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಿಪಿಎಂ ನೇತಾರರಾದ ಅಬ್ದುಲ್ ರಜಾಕ್ ಚಿಪ್ಪಾರ್, ಕಮಲಾಕ್ಷ ದೇರಂಬಳ, ಲೊಕೇಶ ಚಿನಾಲ, ರಾಮಚಂದ್ರ.ಟಿ, ಏರಿನ್ ಜೋಸ್ಪಿನ್, ಕೃಷ್ಣ ಕೊಮ್ಮಂಗಳ, ಶಿವರಾಜ್ ಕೆ.ಎಂ. ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಸಿಪಿಎಂ ಮೀಂಜ ಫಸ್ಟ್ ಲೋಕಲ್ ಸಮಿತಿ ಹಾಗೂ ದರ್ಬೆ ಬ್ರಾಂಚ್ ಸಮಿತಿ ಸಂತಾಪ ಸೂಚಿಸಿದೆ.

You cannot copy contents of this page