ಕಾಸರಗೋಡು: ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆ ವಿದ್ಯಾನಗರದಲ್ಲಿರುವ ಎಕೆಜಿ ಮಂದಿರದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದರಂಗವಾಗಿ ಸಿಪಿಎಂನ ಮಾಜಿ ಕೇಂದ್ರ ಸಮಿತಿ ಸದಸ್ಯ ಪಿ. ಕರುಣಾಕರನ್ ಧ್ವಜಾರೋಹಣ ನಡೆಸಿದರು. ಬಳಿಕ ನಡೆದ ಸಭೆಯನ್ನು ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸಿದರು. ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯ ಪಿ. ಜನಾರ್ದನನ್ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್, ಕೇಂದ್ರ ಸಮಿತಿ ಸದಸ್ಯರಾದ ಡಾ. ಥೋಮಸ್ ಐಸಾಕ್, ಪಿ. ರಾಜೀವ್, ಪಿ.ಕೆ. ಬಿಜು, ಪಿ. ಜಯರಾಜನ್, ಎಂ.ವಿ. ಜಯರಾಜನ್ ಮೊದಲಾದವರು ಉಪಸ್ಥಿತರಿದ್ದರು.






