ರೈಲಿನಲ್ಲಿ ಮೊಬೈಲ್ ಫೋನ್ ಕಳವು ಆರೋಪಿ ವಿರುದ್ಧ ಮತ್ತೆ 5 ಕೇಸು ದಾಖಲು: ವಾಸಸ್ಥಳದಿಂದ ಮೊಬೈಲ್ ಫೋನ್,  ಪಾಸ್‌ಪೋರ್ಟ್ ಸಹಿತ ದಾಖಲೆಪತ್ರಗಳು ಪತ್ತೆ

ಕಾಸರಗೋಡು:  ರೈಲುಗಳಲ್ಲಿ ನಿರಂತರ ಕಳವು ನಡೆಸುವ ಮುಟ್ಟತ್ತೋಡಿ ಪನ್ನಿಪ್ಪಾರೆಯ ಕೆ.ಅಬ್ದುಲ್ಲ ಎಂಬಾತನ ವಿರುದ್ಧ ಮತ್ತೆ ೫ ಕೇಸುಗಳನ್ನು ರೈಲ್ವೇ ಪೊಲೀಸರು ದಾಖಲಿಸಿಕೊಂಡಿ ದ್ದಾರೆ. ಈ ತಿಂಗಳ 7ರಂದು ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಿಂದ ಎರಡು ಮೊಬೈಲ್ ಫೋನ್‌ಗಳನ್ನು ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾದ ಅಬ್ದುಲ್ಲ ಪ್ರಸ್ತುತ  ರಿಮಾಂಡ್‌ನಲ್ಲಿದ್ದಾನೆ. ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದು ಮಾಹಿತಿ ಸಂಗ್ರಹಕ್ಕಾಗಿ ಕರೆದೊ ಯ್ದಾಗ ಈತ ಹಲವು ಕಳವು ನಡೆಸಿದ್ದಾನೆಂದು ತಿಳಿದುಬಂದಿದೆ. ಈತ ವಾಸಿಸುವ ಕಾಞಂಗಾಡ್ ರೈಲು ನಿಲ್ದಾಣ ಸಮೀಪದ ಬಾಡಿಗೆ ಮನೆಯಿಂದ ಹಲವು ಫೋನ್‌ಗಳು ಹಾಗೂ ಪಾಸ್‌ಪೋರ್ಟ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಲ್ಲದೆ ಹಲವು ಬ್ಯಾಗ್‌ಗಳು, ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ.  ಕಳೆದ ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಹಲವು ರೈಲುಗಳಲ್ಲಿ ಪ್ರಯಾಣಿಕರ ಮೊಬೈಲ್ ಫೋನ್‌ಗಳು ಹಾಗೂ ಮತ್ತಿತರ ಬೆಲೆಬಾಳುವ ವಸ್ತು ಗಳನ್ನು ಈತ ಕಳವು ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.  ಪೊಲೀಸರು ಈತನನ್ನು ಸಮಗ್ರವಾಗಿ ತನಿಖೆಗೊಳಪಡಿಸಿದಾಗ ಹಲವು ರೈಲುಗಳಲ್ಲಿ ಕಳವು ನಡೆಸಿರು ವುದನ್ನು ಆರೋಪಿ ತಪ್ಪೊಪ್ಪಿಕೊಂ ಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕಾಸರಗೋಡು ರೈಲ್ವೇ ಪೊಲೀಸರು ಮತ್ತೆ ಐದು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page