ಪೈವಳಿಕೆ : ಕಾಂಗ್ರೆಸ್(ಐ) ಪೈವಳಿಕೆ ಮಂಡಲ ಮಾಜಿ ಅಧ್ಯಕ್ಷ, ಬ್ಲೋಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ, ನಿವೃತ್ತ ಮುಖ್ಯೋಪಾಧ್ಯಾಯ ಕಯ್ಯಾರು ಕನ್ನಡಜಾಲು ನಿವಾಸಿ ಥೋಮಸ್ ಕ್ರಾಸ್ತ (94) ನಿಧನರಾದರು. ಗಾಂಧೀವಾದಿಯಾಗಿದ್ದ ಇವರು ಕಾಂಗ್ರೆಸ್ ಪಕ್ಷವನ್ನು ಪೈವಳಿಕೆಯಲ್ಲಿ ಬೆಳೆಸುವಲ್ಲಿ ನಿರತರಾಗಿದ್ದರು. ಮಾದರಿ ಕೃಷಿಕರಾಗಿದ್ದು ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಮೇರಿ ಕ್ರಾಸ್ತ, ಪುತ್ರ ಕ್ರಿಸ್ತಿಫರ್ ಜೆ. ಕ್ರಾಸ್ತಾ, ಸೊಸೆ ಲವೀನ ಡಿ ಸೋಜಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಮಂಡಲ ಸಮಿತಿ, ಡಿಕೆಟಿಎಫ್ ಮಂಡಲ ಸಮಿತಿ ಸಂತಾಪ ಸೂಚಿಸಿದೆ.ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸೋಮಶೇಖರ ಜೆ.ಎಸ್, ಹರ್ಷಾದ್ ವರ್ಕಾಡಿ, ಬ್ಲೋಕ್ ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ ರೈ, ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಾಸ್ಟರ್, ಪಂಚಾಯತ್ ಸದಸ್ಯೆ ಪ್ರಿನ್ಸಿ ಡಿ ಸೋಜ, ಯು.ಡಿ.ಎಫ್. ನಾಯಕರಾದ ಜೆಡ್.ಎ. ಕಯ್ಯಾರ್, ನಾರಾಯಣ ಏದಾರ್, ಅಸೀಸ್ ಕಳಾಯಿ, ಸಚ್ಚಿದಾನಂದ ರೈ, ವಿನ್ಸಿ ಜೋಡುಕಲ್ಲು, ನೌಶಾದ್ ಪಟ್ಲ, ಸಲೀಂ ಕಳಾಯಿ, ಅಸಿಸ್ ಚೇವಾರು, ಚಂದ್ರ ಬದಿಯಾರು, ಶಿವರಾಮ ಶೆಟ್ಟಿ, ಅಬ್ದುಲ್ಲ ಹಾಜಿ ಮೃತರ ಮನೆಗೆ ಭೇಟಿ ನೀಡಿದರು.






