ಕಾಸರಗೋಡು: ಕಾಸರಗೋಡು-ಮಂಗಳೂರು ಅಂತಾರಾಜ್ಯ ರೂಟ್ನಲ್ಲಿ ಪ್ರಯಾಣ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೀಕ್ ಸಮಯಗಳಲ್ಲಿ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳನ್ನು ಮಂಜೂರು ಮಾಡಬೇಕೆಂದು ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ಆಗ್ರಹಿಸಿದರು. ಬೆಳಿಗ್ಗೆ ಹಾಗೂ ಸಂಜೆ ಹಲವಾರು ಪ್ರಯಾಣಿಕರು ಬಸ್ಗೆ ಏರಲು ಸಾಧ್ಯವಾಗದೆ ತೀವ್ರ ಸಮಸ್ಯೆ ಅನುಭವಿ ಸುತ್ತಿದ್ದಾರೆ. ಬೆಳಿಗ್ಗೆ ಕಾಸರಗೋಡಿನಿಂದ ಬಸ್ ಹೊರಡುವಾಗಲೇ ಪ್ರಯಾಣಿಕರು ತುಂಬಿ ತುಳುಕುವ ಅವಸ್ಥೆ ಇದೆ. ಆದುದರಿಂದ ಮಂಜೇಶ್ವರ ತಾಲೂಕಿನ ಮೊಗ್ರಾಲ್, ಕುಂಬಳೆ, ಉಪ್ಪಳ, ಮಂಜೇಶ್ವರ ಸಹಿತವಿರುವ ಸ್ಥಳಗಳಿಂದ ಪ್ರಯಾಣಿಕರಿಗೆ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ಮಂಗಳೂರು ಭಾಗದ ವಿವಿಧ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು, ಕೆಲಸದ ಅಗತ್ಯಗಳಿಗಾಗಿ ಸಾಗುವವರು ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಸಹಿತದ ನೂರಾರು ಮಂದಿ ದಿನಂಪ್ರತಿ ಪ್ರಯಾಣ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಂಜೆ ವೇಳೆ ಮಂಗಳೂರಿನಿಂದ ಹಿಂತಿರುಗುವ ಸಮಯದಲ್ಲೂ ಇದಕ್ಕೆ ಸಮಾನವಾದ ಸಮಸ್ಯೆ ಕಂಡು ಬರುತ್ತದೆ. ಮಂಗಳೂರು ಪೇಟೆಯಿಂದಲೇ ಬಸ್ಗಳು ತುಂಬಿ ಆಗಮಿಸುತ್ತಿದ್ದು, ದಾರಿ ಮಧ್ಯೆಗಿನ ನಿಲುಗಡೆಗಳಿಂದ ಪ್ರಯಾಣಿಕರಿಗೆ ಹತ್ತಲು ಸಾಧ್ಯವಾಗದ ಸನ್ನಿವೇಶವಿದೆ. ಈ ತೀವ್ರ ಪ್ರಯಾಣ ಸಮಸ್ಯೆಗೆ ಪರಿಹಾರವಾಗಬೇ ಕಿದ್ದರೆ ಬೆಳಿಗ್ಗೆ ಕಾಸರಗೋಡಿನಿಂದ ಮಂಗಳೂರಿಗೂ, ಸಂಜೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೂ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳನ್ನು ಕೂಡಲೇ ಮಂಜೂರು ಮಾಡಬೇಕೆಂದು ಶಾಸಕರು ಸಾರಿಗೆ ಸಚಿವರಲ್ಲಿ ಆಗ್ರಹಿಸಿದ್ದಾರೆ.
ಶಾಸಕ ಎಕೆಎಂ ಅಶ್ರಫ್ ಮುಂದಿಟ್ಟ ವಿಷಯ ಬಹಳ ಗೌರವಯುತವಾಗಿದೆ ಎಂದುಸಾರಿಗೆ ಸಚಿವ ಸಿ.ಪಿ. ಜೋನ್ ವಿಧಾನಸಭೆಯಲ್ಲಿ ಉತ್ತರ ನೀಡಿದ್ದು, ಈ ಬಗ್ಗೆ ಪರಿಶೀಲಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಮಲಬಾರ್ ವಲಯದ ಪ್ರಯಾಣ ಸಮಸ್ಯೆ ಪರಿಹರಿಸುವುದಕ್ಕಾಗಿ ವಿವಿಧ ರೂಟ್ಗಳಲ್ಲಿ ಹೆಚ್ಚುವರಿ ಬಸ್ಗಳನ್ನು ಸಂಚರಿಸುವಂತೆ ಮಾಡುವ ಕಾರ್ಯ ಸರಕಾರದ ಪರಿಗಣನೆಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.







