ಪ್ರಜಾಪ್ರಭುತ್ವ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಾಗದಿರುವುದೇ ಎಸ್‌ಐಆರ್‌ನ್ನು ಕಾಂಗ್ರೆಸ್ ವಿರೋಧಿಸಲು ಕಾರಣ-ಎಂ.ಎಲ್. ಅಶ್ವಿನಿ

ಅಡೂರು:  ಸ್ವಾತಂತ್ರ್ಯಾನಂತರ ೯ ಬಾರಿ ಮತದಾರರ ಪಟ್ಟಿಯನ್ನು ಪರಿಷ್ಕರಿಸ ಲಾಗಿದ್ದರೂ ಈ ಬಾರಿ ಮಾತ್ರ ಅದನ್ನು ವಿವಾದ ಮಾಡುತ್ತಿರುವುದು ಪ್ರಜಾಪ್ರಭುತ್ವ ಮಾದರಿಯಲ್ಲಿ ಇನ್ನು ಮುಂದೆ ಚುನಾವಣೆ ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂಬ ಕಾಂಗ್ರೆಸ್ ನಾಯಕತ್ವದ ಅರಿವಿನಿಂದಾಗಿದೆ ಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಬೆಳ್ಳಿಪ್ಪಾಡಿ ದೇವರಗುಂಡ ತರವಾಡು ಸಭಾಂಗಣದಲ್ಲಿ ನಡೆದ ಬಿಜೆಪಿ ದೇಲಂಪಾಡಿ ಏರಿಯಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೆಹಲಿಯಲ್ಲಿ ಕೆಲವೇ ಮಂದಿಯನ್ನು  ಒಗ್ಗೂಡಿಸಿ  ಭಾರತ ಪ್ರತಿಭಟಿಸುತ್ತಿದೆಯೆಂಬ ತಪ್ಪು ಕಲ್ಪನೆಯನ್ನು ಹರಡಲು ಮೋದಿ ವಿರೋಧಿ ಶಕ್ತಿಗಳು ನಡೆಸುತ್ತಿರುವ ಪ್ರಯತ್ನ ಯಶಸ್ವಿಯಾಗದು. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದಂತಹ ಗಲಭೆ ಮತ್ತು ದಂಗೆಗೆ  ಪ್ರತಿಪಕ್ಷಗಳು ಹಾಗೂ  ಐಸ, ಕಾಕ್ರೋಚ್ ಜನತಾ ಪಾರ್ಟಿಯಂತಹ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಅಶ್ವಿನಿ ಆರೋಪಿಸಿದರು. ಉಮೇಶ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಮುಳಿಯಾರು ಮಂಡಲ ಪ್ರಬಾರಿ  ಶಿವಕೃಷ್ಣ ಭಟ್, ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾನಡ್ಕ, ಜಿಲ್ಲಾ ಸಮಿತಿ ಸದಸ್ಯ ಚಂದ್ರ ಶೇಖರ ಬೆಳ್ಳಿಪ್ಪಾಡಿ, ಅಡೂರು ಏರಿಯಾ ಅಧ್ಯಕ್ಷ ರಾಜೇಶ್ ಪಾಂಡಿ, ಬೆಳ್ಳಿಪ್ಪಾಡಿ ವಾರ್ಡ್ ಜನಪ್ರತಿನಿಧಿ ಧನಂಜಯ ಬಿ, ವಿಕ್ರಾಂತ್ ಬಿ.ಎಂ, ಬ್ರೀಸ್ ಮಾತನಾಡಿ ದರು. ಉಮೇಶ್ ಬೆಳ್ಳಿಪ್ಪಾಡಿ ಅವರನ್ನು ಅಧ್ಯಕ್ಷರನ್ನಾಗಿಸಿ ಬಿಜೆಪಿ ದೇಲಂಪಾಡಿ ಏರಿಯಾ ಸಮಿತಿಯನ್ನು ಪುನಾರಚಿಸಲಾ ಯಿತು. ಪ್ರಧಾನ ಕಾರ್ಯ ದರ್ಶಿಯಾಗಿ ಪಿ. ಸತೀಶ್ ದೇಲಂಪಾಡಿ, ಉಪಾಧ್ಯಕ್ಷ ರಾಗಿ ಎಂ . ವಸಂತ, ಮಹೇಶ್ ಭಟ್, ಪ್ರದೀಪ್ ಕುಮಾರ್, ಕೇಶವ ಕುತ್ತಿಮೂಲ, ಮುರಳೀಧರ ಕೆ, ಕಾರ್ಯದರ್ಶಿಗಳಾಗಿ ಹರ್ಷಿತಾ ಬಿ.ಎಚ್, ಸುರೇಂದ್ರ ಪಿ, ಎ. ರಂಜಿನಿ, ಕೆ.ಶೀಲಾವತಿ, ಬಿ. ರವಿಕುಮಾರ್ ಎಂಬಿವರನ್ನು ಆರಿಸಲಾಯಿತು.

RELATED NEWS

You cannot copy contents of this page