ಬೇವಿಂಜೆ: ಮಯಂಗರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾದಿ ಮಹೋತ್ಸವದ ಅಂಗವಾಗಿ ವಿವಿಧ ಉಪಸಮಿತಿಗಳ ಪ್ರಗತಿ ಪರಿಶೀಲನೆ ಹಾಗೂ ಪೂರ್ವಸಿದ್ಧತಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಮಹೋತ್ಸವವು ಡಿಸೆಂಬರ್ 18 ರಿಂದ 27 ರವರೆಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ.
ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರನ್ ಮುಖ್ಯ ಭಾಷಣ ಮಾಡಿ, ಉತ್ಸವದ ಯಶಸ್ಸಿಗೆ ಎಲ್ಲರ ಒಗ್ಗಟ್ಟಿನ ಸೇವೆ ಅಗತ್ಯ ಎಂದು ಕರೆ ನೀಡಿದರು.
ಗೋವಿಂದ ಬಳ್ಳಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಸವದ ಯಶಸ್ವಿ ನಿರ್ವಹಣೆಗಾಗಿ ರಚಿಸಲಾಗಿರುವ ಉಪಸಮಿತಿಗಳು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಯೋಜನೆ ಗಳ ಬಗ್ಗೆ ವಿವರಿಸಿದರು.
ಕ್ಷೇತ್ರದ ಆಡಳಿತಾಧಿಕಾರಿಗಳಾದ ವಿಷ್ಣುಮೂರ್ತಿ ಕಕ್ಕಿಲ್ಲಾಯ ಹಾಗೂ ಗೋಪಾಲಕೃಷ್ಣ ಕಕ್ಕಿಲ್ಲಾಯ ಉಪಸ್ಥಿತರಿದ್ದು, ಧಾರ್ಮಿಕ ಮತ್ತು ವ್ಯವಸ್ಥಿತ ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ಅಗತ್ಯವಾದ ಮಾರ್ಗದರ್ಶನ ನೀಡಿದರು. ಬಿ. ಕೆ. ವಿಜಯನ್ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಆಹಾರ ಸಮಿತಿಯ ಸಂಚಾಲಕರಾದ ಜಯರಾಜ ಕುಣೆಕುಳ್ಳಾಯ, ಮೋಹನ ಐಲ್ಕುಂಜೆ, ಜಲವಿತರಣೆ ಸಮಿತಿಯ ಸಂಚಾಲಕ ಕುಂಞAಬು, ಬೆಳಕು ಮತ್ತು ಚಪ್ಪರ ಸಮಿತಿಯ ಸಂಚಾಲಕ ಪವಿತ್ರನ್ ಸಮಿತಿಗಳು ಹಮ್ಮಿಕೊಂ ಡಿರುವ ಸಿದ್ಧತೆಗಳ ರೂಪರೇಶೆಗಳನ್ನು ಸಭೆಯ ಮುಂದಿಟ್ಟರು. ಬಿ.ಎನ್. ಪ್ರಭಾಕರನ್ ವಂದಿಸಿದರು.






