ಶಬರಿಮಲೆ: ಶಬರಿಮಲೆ ದೇಗುಲದ ನೂತನ ಮುಖ್ಯ ಅರ್ಚಕರಾಗಿ ತಿರುವನಂತಪುರ ಪುಳಿಮೂಡ್ ಪಿ.ಆರ್. ಎಸ್. ಕೃಷ್ಣಾ ಅಂಬುಜಾ ವಿಳಾಸಂ ರಸ್ತೆಯ ಅರಿಕ್ಕರಇಲ್ಲತ್ತ್ ಅರೀಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂದಿರಿ (50) ಆಯ್ಕೆಗೊಂಡಿದ್ದಾರೆ.ಕಲ್ಲಿಕೋಟೆ ವಡಗರ ಮಣಿಯೂರ್ ಪಾಲಯಾಡ್ನಡ ಅಯಾಟ್ಟತ್ತಿಲ್ಲಂ ಎ. ದಾಮೋದರನ್ ನಂಬೂದಿರಿ (52)ರನ್ನು ಮಾಳಿಗಪುರಂ ಕ್ಷೇತ್ರದ ನೂತನ ಮುಖ್ಯ ಅರ್ಚಕರನ್ನಾಗಿ ಇದೇ ಸಂದರ್ಭದಲ್ಲಿ ಆರಿಸಲಾಗಿದೆ. ಶಬರಿಮಲೆ ಕ್ಷೇತ್ರದ ಸನ್ನಿಧಾನದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಅದೃಷ್ಟ ಚೀಟಿ ಎತ್ತುವ ಮೂಲಕ ಈ ಇಬ್ಬರನ್ನು ಆರಿಸಲಾಯಿತು. ಮುಂದಿನ ಒಂದು ವರ್ಷದ ಅವಧಿ ತನಕ ಇವರನ್ನು ಈ ಸ್ಥಾನಗಳಿಗೆ ನೇಮಿಸಲಾಗಿದೆ. ನವೆಂಬರ್ ೧೬ರಂದು ಅಭಿಷೇಕದ ಮೂಲಕ ಇವರಿಬ್ಬರು ಮುಖ್ಯ ಅರ್ಚಕರಾಗಿ ಸ್ಥಾನ ವಹಿಸಿಕೊಳ್ಳುವರು.






