ತಿರುವನಂತಪುರ: ಪಾರಶಾಲಾದಲ್ಲಿ ರೈಲ್ವೇ ಹಳಿಗೆ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ರೈಲಿನ ಇಂಜಿನ್ ಹಳಿತಪ್ಪಿದೆ. ಬಿಲಾಸ್ಪುರ್- ತಿರುನಲ್ವೇ ಲಿ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೆ ತುತ್ತಾಗಿದೆ. ಇಂದು ಮುಂಜಾನೆ 2 ಗಂಟೆ ವೇಳೆ ಹಳಿಗೆ ಮಣ್ಣು ಬಿದ್ದಿದೆ. ಈ ಸಮಯ ಆ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿನ ಇಂಜಿನ್ನ 4 ಚಕ್ರಗಳು ಹಳಿ ತಪ್ಪಿವೆ. ಆದರೆ ಯಾರಿಗೂ ಗಾಯ ಉಂಟಾಗಿಲ್ಲ. ಭಾರೀ ಮಳೆ ಹಿನ್ನೆಲೆಯಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣು ತೆರವು ಗೊಳಿಸಲಿರುವ ಯತ್ನ ಮುಂದುವರಿಯುತ್ತಿದೆ. ಘಟನೆಯಿಂದಾಗಿ ಮೂರು ರೈಲುಗಳ ಸಂಚಾರ ಮೊಟಕುಗೊಳಿಸಲಾಗಿದೆ.







