ಮಹಿಳೆಯ ಸಂಕಷ್ಟಕ್ಕೆ ನೆರವಾದ ಕಾಸರಗೋಡು ಜನರಲ್ ಆಸ್ಪತ್ರೆಯ ನೌಕರರು: ವ್ಹೀಲ್ ಚೆಯರ್ ಕೊಡುಗೆ

ಕಾಸರಗೋಡು: ಬಡ ರೋಗಿಗಳಿಗೆ ಸಹಾಯ ಒದಗಿಸುವ ವಿಷಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ನೌಕರರು ಮಾದರಿಯಾಗಿದ್ದಾರೆ.  ಸಂಬಂಧಿಕರು, ಕುಟುಂಬದವರು ಎಲ್ಲ ಇದ್ದರೂ ಯಾರೂ ಕೂಡಾ ಸಹಾಯ ನೀಡದೆ ರೋಗ ತಗಲಿ ಅಸ್ವಸ್ಥರಾದವ ರನ್ನು ಪೊಲೀಸರು ಹಾಗೂ ಅಗ್ನಿಶಾಮಕದಳ, ಸಂಘ ಸಂಸ್ಥೆಗಳ ಕಾರ್ಯಕರ್ತರು ಚಿಕಿತ್ಸೆಗಾಗಿ ತಲು ಪಿಸುವುದು ಜನರಲ್ ಆಸ್ಪತ್ರೆಗಾಗಿದೆ. ಇವರನ್ನು ಸ್ನಾನ ಮಾಡಿಸಿ ಪ್ರಾಥಮಿಕ ಅಗತ್ಯಗಳಿಗೆ ಸಹಾಯ ನೀಡುವು ದೆಲ್ಲವೂ ಇಲ್ಲಿನ ನೌಕರರಾಗಿದ್ದಾರೆ. ಹಲವು ರೋಗಿಗಳು ಹಾಸಿಗೆಯಲ್ಲೇ ಪ್ರಾಥಮಿಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಈ ಅವಸ್ಥೆಯಲ್ಲಿ ಆರೈಕೆ ಮಾಡಲು ಸಾಧ್ಯವಾಗದೆ ಸಂಬಂಧಿಕರು ಇವರನ್ನು ಉಪೇಕ್ಷಿಸುತ್ತಿದ್ದಾರೆ. ಇವರಿಗೆ ಡೈಪರ್, ಬಟ್ಟೆಬರೆ, ಬೆಳಗ್ಗಿನ ಉಪಹಾರ ಎಲ್ಲಾ ಇಲ್ಲಿನ ತಾತ್ಕಾಲಿಕ, ಖಾಯಂ ನೌಕರರ ನೇತೃತ್ವದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಹಲವಾರು ಕಾರುಣ್ಯ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಈ ಮಧ್ಯೆ ಹಾಸಿಗೆ ಹಿಡಿದ ಪತಿಯ ಚಿಕಿತ್ಸೆಗಾಗಿ ತಲುಪಿದ ಓರ್ವೆ ಮಹಿಳೆಯ ಕಣ್ಣೀರಿನ ಕಥೆಯನ್ನು ಕೇಳಿದ ನೌಕರರು ಆ ಮಹಿಳೆಯ ಆಗ್ರಹವನ್ನು ಈಡೇರಿಸಿದರೆ.

ಸೆಕ್ಯೂರಿಟಿ ನೌಕರನಲ್ಲಿ ಆ ಮಹಿಳೆ ತನ್ನ ಸಂಕಷ್ಟವನ್ನು ವಿವರಿಸಿದ್ದರು. ‘ತನ್ನ ಪತಿ ರೋಗಿಯಾಗಿದ್ದಾರೆ. ಮನೆಯಲ್ಲಿ ತಂದೆ ಕೂಡಾ ಹಾಸಿಗೆಯಲ್ಲಿಯೇ ಮಲಗಿದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಒಂದು ಹಳೆಯ ವ್ಹೀಲ್ ಚೆಯರ್ ಆದರೂ ಲಭಿಸಿದ್ದರೆ ತಂದೆಯನ್ನು ಬಾತ್‌ರೂಂಗೆ ಕರೆದೊಯ್ಯಲು, ಹೊರಗಿನ ಪ್ರಪಂಚವನ್ನು ತೋರಿಸಲು ಉಪಕಾರವಾಗುತ್ತಿತ್ತು’ ಎಂದು ತಿಳಿಸಿದ್ದರು. ಈ ವಿಷಯವನ್ನು ತಿಳಿದ ನೌಕರ ಸಂಘ ಸಂಸ್ಥೆಯೊಂದರ ಕಾರ್ಯ ಕರ್ತನನ್ನು ಸಮೀಪಿಸಿ ಒಂದು ವಾರ ದೊಳಗೆ ಆ ಮಹಿಳೆಗೆ ಹೊಸ ವ್ಹೀಲ್ ಚೆಯರ್ ಕೊಡುಗೆಯಾಗಿ ನೀಡಿದ್ದಾರೆ.

You cannot copy contents of this page